ಪಡುಬಿದ್ರೆ: ದಿನಪಯೋಗಿ ವಸ್ತುಗಳಲ್ಲಿ ಮೂಡಿಬಂತು ಗಣಪತಿ

Update: 2018-09-12 15:12 GMT

ಪಡುಬಿದ್ರೆ, ಸೆ. 12: ಫಲಿಮಾರಿನ ಆರ್ಟ್ ಗ್ಯಾಲರಿಯ ವೆಂಕಿ ಫಲಿಮಾರು ದಿನೋಪಯೋಗಿ ವಸ್ತುಗಳ ಮೂಲಕ ಪರಿಸರದ ಸ್ನೇಹಿ ಗಣಪತಿಯನ್ನು ರಚಿಸಿ ಎಲ್ಲರ ಗಮನಸೆಳೆದಿದ್ದಾರೆ. 

ಬುಟ್ಟಿಗಳು, ಚಾಪೆ, ತಟ್ಟಿಕುಡುಪು, ಬೀಡಿ ಸೂಪ್, ತಡ್ಪೆ, ಹತ್ತಿ ಬಟ್ಟೆ, ಹಾಳೆತಟ್ಟೆ, ತೆಂಗಿನ ನಾರಿನ ದಾರವನ್ನು ಬಳಸಿ ಒಂದು ವಾರದ ಪರಿಶ್ರಮದಲ್ಲಿ ಗಣಪತಿಯನ್ನು ರಚಿಸಿರುವ ಈ ಗಣಪತಿ 12x5 ಅಡಿ ಎತ್ತರ ಇದೆ. ಸೆಪ್ಟೆಂಬರ್ 12ರಿಂದ ಸುಮಾರು ಒಂದು ತಿಂಗಳ ಕಾಲ ಚಿತ್ರಾಲಯ ಆರ್ಟ್ ಗ್ಯಾಲರಿಯಲ್ಲಿ ಈ ಕಲಾಕೃತಿ ಪ್ರದರ್ಶನಗೊಳ್ಳಲಿದೆ.

ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ ಪಡುಬಿದ್ರಿ ಕಲಾಕೃತಿಯನ್ನು ಬುಧವಾರ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಕಲಾವಿದ ವೆಂಕಿ ಫಲಿಮಾರು ಪರಿಸರ ಸ್ನೇಹಿಯಾಗಿ ರಚಿಸಿರುವುದನ್ನು  ಶ್ಲಾಘಿಸಿ ಮುಂದಿನ ದಿನಗಳಲ್ಲಿ ರಾಜ್ಯ ಪ್ರಶಸ್ತಿ ದೊರಕಲಿ ಎಂದು ಹಾರೈಸಿದರು. 

ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿತೇಂದ್ರ ಪುಟಾರ್ಡೋ, ಸದಸ್ಯರಾದ ಮಧುಕರ್ ಎಂ ಸುವರ್ಣ, ಗಾಯತ್ರಿ ಡಿ ಪ್ರಭು, ವಾಸುದೇವ ಪಲಿಮಾರ್, ಸತೀಶ್ ದೇವಾಡಿಗ, ದೀಪಕ್ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News