ಮಣಿಪಾಲ: ದೇಶಭಕ್ತಿ ಗೀತೆಗಾಯನ ಸ್ಪರ್ಧೆ; ವಿಜೇತ ತಂಡಗಳಿಗೆ ಬಹುಮಾನ ವಿತರಣೆ

Update: 2018-09-12 16:14 GMT

ಉಡುಪಿ, ಸೆ.12: ಮಣಿಪಾಲದ ಅಕಾಡೆಮಿ ಆಪ್‌ಜನರಲ್ ಎಜ್ಯುಕೇಶನ್ ಹಾಗೂ ಸ್ಕೂಲ್ ಆಪ್ ಕಮ್ಯೂನಿಕೇಸನ್ ಮಣಿಪಾಲ(ಎಸ್‌ಓಸಿ) ಇದರ ಸಹಕಾರದೊಂದಿಗೆ ರೇಡಿಯೋ ಮಣಿಪಾಲ(90.4 ಎಫ್‌ಎಂ) ಸಮುದಾಯ ಬಾನುಲಿ ಕೇಂದ್ರ ಹಮ್ಮಿಕೊಂಡ ಉಡುಪಿ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಎಸ್‌ಓಸಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಇತ್ತಿೀಚೆಗೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜ್ಯುಕೇಶನ್ (ಮಾಹೆ)ನ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ವಿದ್ಯಾರ್ಥಿಗಳು ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ಈ ನೆಲೆಯಲ್ಲಿ ದೇಶಭಕ್ತಿ ಗೀತೆಗಳ ಕಲಿಕೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಸ್ಕೂಲ್ ಆಪ್ ಕಮ್ಯೂನಿಕೇಶನ್‌ನ ನಿರ್ದೆಶಕಿ ಡಾ.ಪದ್ಮಾರಾಣಿ ಉಪಸ್ಥಿತ ರಿದ್ದರು. ರೇಡಿಯೋ ಮಣಿಪಾಲದ ಕಾರ್ಯಕ್ರಮ ಸಂಯೋಜಕರಾದ ಕೆ. ಶ್ಯಾಮ್ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News