ಭಾರತ್ ಬಂದ್: ಎಂಟನೇ ಪ್ರಕರಣ ದಾಖಲು

Update: 2018-09-12 16:21 GMT

ಉಡುಪಿ, ಸೆ.12: ಭಾರತ್ ಬಂದ್ ವೇಳೆ ಉಡುಪಿಯಲ್ಲಿ ನಡೆದ ಘರ್ಷಣೆ, ಹಲ್ಲೆಗೆ ಸಂಬಂಸಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ಮೇಲೆ 8ನೇ ಪ್ರಕರಣ ಬುಧವಾರ ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿದೆ.

ಕಾರಿನಲ್ಲಿ ಹೋಗುತ್ತಿದ್ದ ಕಾಂಗ್ರೆಸ್ ಮುಖಂಡರನ್ನು ಕಡಿಯಾಳಿ ಬಳಿ ಅಡ್ಡಗಟ್ಟಿ ನಿಲ್ಲಿಸಿದ್ದ ಚೈತ್ರಾ ಕುಂದಾಪುರ ಹಾಗೂ ಸಂಗಡಿಗರು ಜೀವ ಬೆದರಿಕೆ ಹಾಕಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ದೂರು ನೀಡಲಾಗಿದೆ.

ಚಂದ್ರಿಕಾ ಶೆಟ್ಟಿ ತನ್ನ ಸ್ನೇಹಿತರಾದ ಜ್ಯೋತಿ ಹೆಬ್ಬಾರ್ ಹಾಗೂ ಆಶಾ ಕಡಿಯಾಳಿ ಅವರೊಂದಿಗೆ ಉಡುಪಿಯಿಂದ ಮಣಿಪಾಲಕ್ಕೆ ಹೋಗುತ್ತಿದ್ದ ವೇಳೆ ಕಾರನ್ನು ಅಡ್ಡಗಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಾಗಿ ಚೈತ್ರಾ ಕುಂದಾಪುರ, ದಿನಕರ ಪೂಜಾರಿ, ಯೋಗೀಶ್ ವಿ. ಸಾಲ್ಯಾನ್, ಶರತ್ ಬೈಲಕೆರೆ, ಗಿರೀಶ್ ಅಂಚನ್, ದಿನೇಶ್ ಅಮೀನ್, ಬಾಲಕೃಷ್ಣ ಶೆಟ್ಟಿ, ದಾವೂದ್, ದಿವಾಕರ ಪೂಜಾರಿ, ವಿನಾಯಕ್ ಶೇಟ್, ಶಿವರಾಜ್ ಕುಮಾರ್, ಆರೀಫ್ ದೊಡ್ಡಣಗುಡ್ಡೆ, ರಾಕೇಶ್ ಜೋಗಿ ಸಹಿತ ಇತರರ ಮೇಲೆ ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News