ಬ್ರೈಡ್ಸ್ ಆಫ್ ಇಂಡಿಯಾ ಕ್ಯಾಂಪೇನ್ ಸೀಸನ್ 6: ಇಬ್ಬರಿಗೆ ವಿದೇಶ ಪ್ರವಾಸದ ಅವಕಾಶ

Update: 2018-09-12 16:36 GMT

ಮಂಗಳೂರು, ಸೆ.12: ಬ್ರೈಡ್ಸ್ ಆಫ್ ಇಂಡಿಯಾ ಕ್ಯಾಂಪೇನ್ ಸೀಸನ್ 6ರ 5ನೆ ಹಂತದ ಹನಿಮೂನ್ ಪ್ರವಾಸ ಅದೃಷ್ಟ ಕೂಪನ್ ಯೋಜನೆಯಲ್ಲಿ ಮಹಮ್ಮದ್ ಅಕಿಬ್ (ಸಿಂಗಾಪುರ), ನೌಫಾಲ್ ಇಸ್ಮಾಯೀಲ್ (ಮಲೇಶಿಯಾ) ವಿದೇಶದ ಉಚಿತ ಪ್ರವಾಸದ ಅವಕಾಶವನ್ನು ಪಡೆದುಕೊಂಡಿದ್ದಾರೆ.

ತಮಿಳು ನಾಡು ಹೊರತು ಪಡಿಸಿ ಭಾರತದಾದ್ಯಂತ ಇರುವ ಮಲಬಾರ್ ವಜ್ರ ಮತ್ತು ಚಿನ್ನಾಭರಣ ಮಳಿಗೆಯಲ್ಲಿ 2018 ಡಿಸೆಂಬರ್ ಒಳಗೆ ಮದುವೆ ಅಭರಣ ಖರೀದಿಸುವ ಗ್ರಾಹಕರಿಗೆ ಉಚಿತ ವಿದೇಶ ಪ್ರವಾಸದ ಅದೃಷ್ಟದ ಕುಪನ್ ದೊರೆಯಲಿದೆ. ಸೀಸನ್ 6ರಲ್ಲಿ 1000 ಜನರಿಗೆ ಈ ಅವಕಾಶ ಪಡೆಯಬಹುದಾಗಿದೆ.

ಈಗಾಗಲೇ 177 ಜನರಿಗೆ ಮತ್ತು ಕರ್ನಾಟಕದಲ್ಲಿ 27 ಜನರಿಗೆ ಉಚಿತ ವಿದೇಶ ಹನಿಮೂನ್ ಪ್ರವಾಸ ಟಿಕೇಟ್ ದೊರೆತಿದೆ. 5ನೆ ಸುತ್ತಿನ ಬಹುಮಾನವನ್ನು ಮಂಗಳೂರು ಪ್ರದರ್ಶನ ಮಳಿಗೆಯ ಸ್ಟೋರ್ ಹೆಡ್ ಶರತ್ ಚಂದ್ರನ್ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News