ಬಾಲಮಂದಿರದಲ್ಲಿ ದಾಖಲಾಗಿದ್ದ ಬಾಲಕ ಪರಾರಿ

Update: 2018-09-12 16:37 GMT

ಮಂಗಳೂರು, ಸೆ.12: ಬೊಂದೇಲ್‌ನ ಬಾಲಕರ ಬಾಲಮಂದಿರದಿಂದ 17 ವರ್ಷದ ಬಾಲಕ ಪರಾರಿಯಾಗಿದ್ದಾನೆ.

ಸೆ.4ರಂದು ಸಂಜೆ ಸಂಸ್ಥೆಯ ರಕ್ಷಕರು ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಬರಲು ಹೋಗಿದ್ದ ವೇಳೆ ಸುಮಂತ್(17)ಬಾಲಮಂದಿರದ ಕಟ್ಟಡದ ಗೋಡೆ ಹಾರಿ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.

ಚಹರೆ: ಬಾಲಕ 168 ಸೆಂ.ಮೀ. ಎತ್ತರವಿದ್ದು, ಕಂದು ಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ತಲೆ ಕೂದಲು, ಉದ್ದ ಮುಖ ಹೊಂದಿದ್ದನು. ಬಾಲಕ ಟಿ-ಶರ್ಟ್ ಮತ್ತು ಪ್ಯಾಂಟ್‌ನ್ನು ಧರಿಸಿದ್ದನು. ಕನ್ನಡ ಭಾಷೆ ಮಾತನಾಡುತ್ತಾನೆ.

ಬಾಲಕನ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಕಾವೂರು ಪೊಲೀಸ್ ಠಾಣೆ (0824-2220533) ಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News