ಮಂಗಳೂರು: ವಿವಿಧೆಡೆ ಗಣೇಶೋತ್ಸವ ಆಚರಣೆ

Update: 2018-09-13 04:58 GMT

ಮಂಗಳೂರು, ಸೆ.13: ನಗರದ ವಿವಿಧೆಡೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಗಣೇಶನನ್ನು ನಾನಾ ರೂಪಗಳಲ್ಲಿ ಚಿತ್ರಿಸಿ ಪೂಜಿಸುವ ಪ್ರಕ್ರಿಯೆ ಎಲ್ಲೆಡೆ ವಿಜೃಂಭನೆಯಿಂದ ನಡೆಯಿತು. ಕೆಲವು ಕಡೆ ಪರಿಸರ ಸ್ನೇಹಿಯಾದ ಮಣ್ಣಿನ ಚಿಕ್ಕ ಚಿಕ್ಕ ಗಣಪನನ್ನು ರೂಪಿಸಿ ಆಚರಿಸಲಾಗುತ್ತಿದೆ.

ನಗರದಾದ್ಯಂತ ಬುಧವಾರವೇ ಅಗತ್ಯ ಸಾಮಗ್ರಿಗಳನ್ನು ಖರೀದಿಸುವ ಭರಾಟೆ ನಡೆದಿದ್ದರೂ ಕೂಡಾ ಗುರುವಾರವೂ ಬಣ್ಣ ಬಣ್ಣದ ಹೂವುಗಳನ್ನು ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು. ಜೊತೆಗೆ ಕಬ್ಬುಗಳನ್ನು ಖರೀದಿಸುವುದು ಕೂಡಾ ಕಂಡು ಬಂತು. ಅದಲ್ಲದೆ ತರಕಾರಿ, ಹಣ್ಣುಹಂಪಲು, ಸಿಹಿ ತಿಂಡಿಗಳಲ್ಲದೆ, ಚೌತಿ ಚಕ್ಕುಲಿ, ಉಂಟೆ, ಮೋದಕ, ಲಡ್ಡು ಇತ್ಯಾದಿಯನ್ನು ಭಾರೀ ಪ್ರಮಾಣದಲ್ಲಿ ಖರೀದಿಸಿ ಹಬ್ಬಕ್ಕೆ ಬಳಸಿಕೊಂಡಿದ್ದಾರೆ.

ಹೂವು, ಕಬ್ಬಿಗೆ ಭಾರೀ ಬೇಡಿಕೆ ಕಂಡು ಬಂತು. ಗುರುವಾರ ನಗರದ ಶರವು ದೇವಸ್ಥಾನ, ನೆಹರೂ ಮೈದಾನ, ಕೆಎಸ್ಸಾರ್ಟಿಸಿ, ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿ, ಪೊಲೀಸ್ ಲೇನ್, ಜಪ್ಪಿನಮೊಗರು ಮತ್ತಿತರ ಕಡೆ ಗಣೇಶನ ವಿಗ್ರಹಗಳನ್ನು ಪೂಜಿಸಲಾಗುತ್ತದೆ. ಕೆಲವು ಸಂಘಟನೆಗಳ ಗಣೇಶೋತ್ಸವವು 50ರ ಸಂಭ್ರಮ ದಾಟಿದ ಹಿನ್ನೆಲೆಯಲ್ಲಿ ವಿಜೃಂಭನೆ ಕಂಡು ಬಂತು.

ಹಬ್ಬದ ಪ್ರಯುಕ್ತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News