ಅಕ್ರಮ ವಲಸಿಗಳೆಂದು ದಿಗ್ಬಂಧನದಲ್ಲಿದ್ದ ಅಸ್ಸಾಂ ಮಹಿಳೆಯ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

Update: 2018-09-13 08:33 GMT

ಹೊಸದಿಲ್ಲಿ, ಸೆ.13: ಅಸ್ಸಾಂನಲ್ಲಿ ಅಕ್ರಮ ವಲಸಿಗರನ್ನು ದಿಗ್ಬಂಧನದಲ್ಲಿರಿಸಲಾದ ಕೇಂದ್ರವೆಂದು ಪರಿಗಣಿಸಲಾದ ಜೈಲಿನಿಂದ ಸೋಫಿಯಾ ಖಾತುನ್ ಎಂಬ ಮಹಿಳೆ ಕೊನೆಗೂ ಹೊರಬರುವಂತಾಗಿದೆ. ಮಹಿಳೆಯ ಹೆತ್ತವರು, ಐದು ಮಂದಿ ಸೋದರರು ಹಾಗೂ ಪತಿ ಎಲ್ಲರೂ ಭಾರತೀಯ ನಾಗರಿಕರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಿ ಆಕೆಯನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದೆ.

2016ರಿಂದ ಅಕ್ರಮ ವಲಸಿಗರ ದಿಗ್ಬಂಧನ ಕೇಂದ್ರದಲ್ಲಿ ಆಕೆಯನ್ನು ಫಾರಿನರ್ಸ್ ಟ್ರಿಬ್ಯುನಲ್ ಆದೇಶದಂತೆ ಇರಿಸಲಾಗಿತ್ತು. ಆಕೆಯನ್ನು ಡಿ-ಮತದಾರೆ ಎಂದೂ ಪರಿಗಣಿಸಲಾಗಿತ್ತು.

ಆಕೆಯ  ಕುಟುಂಬದ ಇತರ ಸದಸ್ಯರು ಭಾರತದ ಪೌರತ್ವ ಹೊಂದಿದವರೆಂದು ರಾಜ್ಯ ಸರಕಾರ ಒಪ್ಪಿರುವುದರಿಂದ ಆಕೆಯನ್ನು ಇನ್ನೂ ದಿಗ್ಬಂಧನದಲ್ಲಿರಿಸುವುದು ಸರಿಯಲ್ಲ ಎಂದು ಜಸ್ಟಿಸ್ ಕುರಿಯನ್ ಜೋಸೆಫ್ ಅವರ ನೇತೃತ್ವದ ನ್ಯಾಯಪೀಠ ಹೇಳಿದೆ. ಪ್ರತಿ ತಿಂಗಳಿಗೊಮ್ಮೆ ಬರ್ಪೇಟಾ ಪೊಲೀಸ್ ಠಾಣೆಗೆ ಹಾಜರಾಗಬೇಕೆಂಬ ಷರತ್ತಿನೊಂದಿಗೆ ಆಕೆಯನ್ನು ಕೊಕ್ರಝರ್ ಜೈಲಿನಿಂದ ಬಿಡುಗಡೆಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News