ಪಾಕ್ ಪ್ರಧಾನಿ ನಿವಾಸ ಇನ್ನು ಸ್ನಾತಕೋತ್ತರ ಶಿಕ್ಷಣ ಕೇಂದ್ರ ..!

Update: 2018-09-13 13:54 GMT

ಇಸ್ಲಾಮಾಬಾದ್, ಸೆ.13: ಪಾಕಿಸ್ತಾನ ಸಾಲದ ಹೊರೆಯಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ನೂತನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ನೇತೃತ್ವದ ಸರಕಾರ  ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

ಪ್ರಧಾನ ಮಂತ್ರಿ  ಇಮ್ರಾನ್ ಖಾನ್ ಅವರು ಪ್ರಧಾನಿಯ  ಅಧಿಕೃತ ನಿವಾಸವನ್ನು ಬಳಸದೆ, ಪ್ರಧಾನಿ ಮನೆಯಲ್ಲಿ  ಸ್ನಾತಕೋತ್ತರ ಶಿಕ್ಷಣ ಕೇಂದ್ರವನ್ನು ತೆರೆಯಲು ಚಿಂತನೆ ನಡೆಸಿದ್ದಾರೆ. ಪ್ರಧಾನಿ ಅವರಂತೆ ರಾಜ್ಯಪಾಲರುಗಳು ರಾಜ್ಯಪಾಲರಿಗೆ ನೀಡಲಾಗಿರುವ ಸರಕಾರಿ ವಸತಿಗೃಹಗಳನ್ನು ತೆರವುಗೊಳಿಸಲಿದ್ದಾರೆ ಎಂದು ಶಿಕ್ಷಣ ಸಚಿವ ಶಫ್ಖತ್ ಮೆಹಮೂದ್ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಸರಕಾರ ಸಾರ್ವಜನಿಕ ಹಣದ ಅಪವ್ಯಯವನ್ನು ತಡೆಗಟ್ಟಲು ಗಮನ ಹರಿಸಿದೆ.ಪ್ರಧಾನ ಮಂತ್ರಿ ಮನೆಯ  ವಾರ್ಷಿಕ ವೆಚ್ಚ ರೂ.470 ಮಿಲಿಯನ್ .ಇದು ಸರಕಾರಕ್ಕೆ ದೊಡ್ಡ ಹೊರೆಯಾಗಿದೆ.

ಲಾಹೋರ್ ನಲ್ಲಿರುವ  ಗವರ್ನರ್ ಹೌಸ್ ಅನ್ನು ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿಗೆ  ಬಳಸಲಾಗುವುದು, ಮುರೇರಿಯಲ್ಲಿರುವ ಪಂಜಾಬ್ ಹೌಸ್  ಪ್ರವಾಸಿ ಸಂಕೀರ್ಣವಾಗಿ ಪರಿವರ್ತನೆಯಾಗಲಿದೆ.  ಕರಾಚಿಯಲ್ಲಿನ ಗವರ್ನರ್ ಹೌಸ್ ಮತ್ತು ಬಲೂಚಿಸ್ತಾನದಲ್ಲಿ ನ ರಾಜ್ಯಪಾಲರ ನಿವಾಸ ವಸ್ತುಸಂಗ್ರಹಾಲಯಗಳಾಗಿ  ಬದಲಾಗಲಿದೆ  ಎಂದು ಅವರು ಸಚಿವರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News