ಮಂಗಳೂರು: ‘ಲ್ಯಾಕ್‌ಮಿ ಅಕಾಡಮಿ’ ಉದ್ಘಾಟನೆ

Update: 2018-09-13 14:27 GMT

ಮಂಗಳೂರು, ಸೆ.13: ನಗರದ ಬಿಜೈ ಕಾಪಿಕಾಡ್ ರಸ್ತೆಯ ಪುಷ್ಪಾ ಕಟ್ಟಡದ ಮೂರನೆ ಅಂತಸ್ತಿನಲ್ಲಿ ಕೇಶ ವಿನ್ಯಾಸ ಮತ್ತು ಸೌಂದರ್ಯಕ್ಕೆ ಸಂಬಂಧಿಸಿ ತರಬೇತಿ ನೀಡುವಂತಹ ‘ಲ್ಯಾಕ್‌ಮಿ ಅಕಾಡಮಿ’ಯ ಉದ್ಘಾಟನಾ ಕಾರ್ಯಕ್ರಮವು ಗುರುವಾರ ನಡೆಯಿತು.

ಚಿತ್ರನಟ-ನಟಿಯರಾದ ದಿಲೀಪ್ ಶೆಟ್ಟಿ, ಕರಿಶ್ಮಾ ಅಮೀನ್, ಶ್ರದ್ಧಾ ಸಾಲ್ಯಾನ್, ಅನ್ವಿತಾ ಸಾಗರ್ ಜಂಟಿಯಾಗಿ ‘ಲ್ಯಾಕ್‌ಮಿ ಅಕಾಡಮಿ’ಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ದಿಲೀಪ್ ಶೆಟ್ಟಿ ಮಾತನಾಡಿ ಈಗ ಸೌಂದರ್ಯ ಪ್ರಜ್ಞೆ ಯುವತಿಯರಲ್ಲಿ ಮಾತ್ರವಲ್ಲ, ಯುವಕರಲ್ಲೂ ಉಂಟಾಗಿದೆ. ಹಾಗಾಗಿ ಈ ಕ್ಷೇತ್ರಕ್ಕೆ ಸಂಬಂಧಿಸಿ ತರಬೇತಿ ಪಡೆದರೆ ಉತ್ತಮ ಭವಿಷ್ಯವಿದೆ ಎಂದರು. ‘ಲ್ಯಾಕ್‌ಮಿ ಅಕಾಡಮಿ’ಯ ಮಾಲಕ ರಿತೇಶ್ ಸ್ವಾಗತಿಸಿದರು. ಕೀರ್ತನ್ ಕಾರ್ಯಕ್ರಮ ನಿರೂಪಿಸಿದರು.

‘ಲ್ಯಾಕ್‌ಮಿ ಅಕಾಡಮಿ’ಯ ಮಾಲಕಿ ಶ್ರುತಿ ಮಾತನಾಡಿ ಚಂದ ಕಾಣಬೇಕು ಎಂಬ ಹಂಬಲ ಎಲ್ಲರಲ್ಲೂ ಇದೆ. ಹಾಗಾಗಿ ಸೌಂದರ್ಯ ಪ್ರಜ್ಞೆಯು ಎಲ್ಲರಿಗೂ ಒಂದಲ್ಲೊಂದು ರೀತಿಯಲ್ಲಿ ಕಾಡುತ್ತಿದೆ. ಮೇಕಪ್‌ಗೆ ಸಂಬಂಧಿಸಿ ನಾನು ಕಲಿಯಲು ಆಸಕ್ತಿ ವಹಿಸಿದಾಗ ಮಂಗಳೂರಿನಲ್ಲಿ ಯಾವುದೇ ಸಂಸ್ಥೆಗಳು ನನಗೆ ಕಾಣಿಸಲಿಲ್ಲ. ಕೊನೆಗೆ ಬೆಂಗಳೂರಿಗೆ ತೆರಳಿ ಕಲಿಯಬೇಕಾಯಿತು. ಬಳಿಕ ಪತಿಯೊಂದಿಗೆ ಸೇರಿ ಮೇಕಪ್, ತಲೆಗೂದಲು, ಚರ್ಮದ ನುಣುಪಿಗೆ ಸಂಬಂಧಿಸಿ ಇಲ್ಲೊಂದು ತರಬೇತಿ ಅಕಾಡಮಿ ಸ್ಥಾಪಿಸಲು ಮುಂದಾದೆ. ಹಾಗೇ ಲ್ಯಾಕ್ಮಿಯ ಫ್ರಾಂಚೈಸಿ ಪಡೆದುಕೊಂಡೆವು. ಗೌರಿ ಗಣೇಶ ಹಬ್ಬದ ಸುದಿನದಂದೇ ಈ ಅಕಾಡಮಿ ತೆರೆಯಲ್ಪಡುತ್ತಿರುವುದು ಸಂತಸದ ವಿಚಾರ ಎಂದರು.

ಇಲ್ಲಿ 1 ತಿಂಗಳಿನಿಂದ ಆರಂಭಿಸಿ 1 ವರ್ಷದವರೆಗೆ ಪೂರ್ತಿಗೊಳಿಸಬಹುದಾದ ಮೂರು ಪ್ರತ್ಯೇಕ ಕೋರ್ಸ್‌ಗಳಿವೆ. ಮೂರು ಪ್ರತ್ಯೇಕ ಕೋರ್ಸ್‌ಗೆ ಕನಿಷ್ಠ 10 ಅಭ್ಯರ್ಥಿಗಳ ಸೇರ್ಪಡೆಗೆ ಅವಕಾಶ ನೀಡುವ ಗುರಿ ಇದೆ. ಆನ್‌ಲೈನ್‌ನಲ್ಲೂ ಅಭ್ಯರ್ಥಿಗಳ ಪ್ರವೇಶ ಪಡೆಯಬಹುದು. ತರಬೇತಿಯ ಶುಲ್ಕವು 10 ಸಾವಿರದಿಂದ 3 ಲಕ್ಷ ರೂ.ವರೆಗೆ ನಿಗದಿಪಡಿಸಲಾಗಿದೆ ಎಂದು ಶ್ರುತಿ ವಿವರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News