ಬಸ್ರೂರು ತುಳುನಾಡೋಚ್ಛಯ-2018: ಸೆ.16ರಂದು ಸ್ವಾಗತ ಸಮಿತಿ ಸಭೆ

Update: 2018-09-14 12:16 GMT

ಉಡುಪಿ, ಸೆ.14: ವಿಶ್ವ ತುಳುವೆರೆ ಆಯನೊ ಕೂಟ, ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ, ಒಡಿಪು ತುಳು ಕೂಟ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬಸ್ರೂರಿನಲ್ಲಿ ಡಿ.21ರಿಂದ 23ರವರೆಗೆ ನಡೆಯುವ ‘ತುಳುನಾಡೋಚ್ಚಯ-2018’ಕ್ಕಾಗಿ ರಚಿಸಲಾಗುವ ಸ್ವಾಗತ ಸಮಿತಿಯ ಸಭೆಯು ಸೆ.16ರ ಬೆಳಗ್ಗೆ 11 ಕ್ಕೆ ಬಸ್ರೂರಿನ ನಿವೇದಿತಾ ಪ್ರೌಢ ಶಾಲೆಯ ವಿಶಾಲಾಕ್ಷಿ ಪೂಂಜ ಸಭಾಭವನದಲ್ಲಿ ನಡೆಯಲಿದೆ.

ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸೌಹಾರ್ದತೆಯನ್ನು ಬಲಪಡಿಸಿ, ಭಾವೈಕ್ಯತೆಯನ್ನು ಉಂಟು ಮಾಡುವುದು ಹಾಗೂ ತುಳು ಭಾಷಾ ಸಂಸ್ಕೃತಿಯನ್ನು ಬಲಪಡಿಸುವುದು ‘ತುಳುನಾಡೋಚ್ಚಯ-2018’ರ ಮೂಲ ಉದ್ದೇಶವಾಗಿದೆ. ಇದರೊಂದಿಗೆ ಬಸ್ರೂರಿನ ಪ್ರಾಚೀನ ತುಳು ಸಂಸ್ಕೃತಿಯ ಅನಾವರಣವನ್ನು ಜಗತ್ತಿಗೆ ಪರಿಚಯಿಸುವುದು ಹಾಗೂ ಪುರಾತನ ದೇವಾಲಯವಾದ ತುಳುವೇಶ್ವರನ ಅಭಿವೃದ್ಧಿುೂ ಇತರ ಪ್ರಮುಖ ಉದ್ದೇಶವಾಗಿದೆ.

ಡಿ. 21, 22 ಹಾಗೂ 23ರಂದು ನಡೆಯುವ ತುಳುನಾಡೋಚ್ಚಯದಲ್ಲಿ ತುಳುನಾಡ ಭಾಷೆ- ಸಂಸ್ಕೃತಿ ಹಾಗೂ ಜಾತಿ, ಮತ, ಭಾಷಾ ಸೌಹಾರ್ದತೆಯನ್ನು ಸಾರುವ ವಿವಿಧ ಗೋಷ್ಠಿ, ಪ್ರಾತ್ಯಕ್ಷಿಕೆ, ವಸ್ತು ಪ್ರದರ್ಶನ, ಜಾನಪದ ಪ್ರದರ್ಶನ, ಆಹಾರೋತ್ಸವ, ಕುಲ ಕಸುಬು ಪ್ರದರ್ಶನಗಳು ನಡೆಯಲಿವೆ.

ಸಮ್ಮೇಳನದಲ್ಲಿ ಕನ್ನಡ, ತುಳು, ಕುಂದಗನ್ನಡ, ಕೊಂಕಣಿ, ಮರಾಠಿ, ಹವ್ಯಕ, ಶಿವಳ್ಳಿ, ಮಲೆಯಾಳ, ಮಾವಿಲ, ಉರ್ದು, ಕರ್ಹಾಡ, ಅರೆಗನ್ನಡ, ಕೊಡವ, ಕೊರಗ, ಬ್ಯಾರಿ ಭಾಷೆಗಳ ಸಾಹಿತ್ಯ, ಸಾಂಸ್ಕೃತಿಕ, ಜನಪದ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅಲ್ಲದೆ ತುಳು ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಗೆ ಕೊಡುಗೆ ನೀಡಿದ ಗಣ್ಯರನ್ನು ಗೌರವಿಸಲಾಗುವುದು ಎಂದು ತುಳುವೆರೆ ಆಯನೊ ಕೂಟದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News