ಇಸ್ಲಾಂ ಧರ್ಮ ನಿಂದನೆ ವಿರುದ್ಧ ಜಿಲ್ಲೆಯಾದ್ಯಂತ ಹೋರಾಟ: ಎಸ್‍ಎಂಎ

Update: 2018-09-14 12:40 GMT

ಬಂಟ್ವಾಳ, ಸೆ. 14: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಡಂಬು ಘಟಕದ ಜಂಟಿ ಆಶ್ರಯದಲ್ಲಿ ಕಂಡಬುವಿನಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮದ ಬಗ್ಗೆ ನಿಂದನೆ ಹಾಗೂ ಕೋಮು ಪ್ರಚೋದನಾತ್ಮಕ ಭಾಷಣ ಮಾಡಿದ ಘಟನೆ ಖಂಡನೀಯವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಸುನ್ನೀ ಮ್ಯಾನೇಜ್‍ಮೆಂಟ್ ಮದರಸ ಅಸೋಶಿಯೇಶನ್(ಎಸ್‍ಎಂಎ) ಜಿಲ್ಲಾಧ್ಯಕ್ಷ ಹಾಜಿ ಕೆ.ಎ ಹಮೀದ್ ಕೊಡಂಗಾಯಿ ಆಗ್ರಹಿಸಿದ್ದಾರೆ. 

ಅವರು ಶುಕ್ರವಾರ ಪುತ್ತೂರು ಜಿಲ್ಲಾ ಸುನ್ನೀ ಮ್ಯಾನೇಜ್‍ಮೆಂಟ್ ಮದರಸ ಅಸೋಶಿಯೇಶನ್(ಎಸ್‍ಎಂಎ) ವತಿಯಿಂದ ವಿಟ್ಲದ ಪ್ರೆಸ್ ಕ್ಲಬ್‍ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುಷ್ಟರಾಜ್ ಭಟ್ ತನ್ನ ಭಾಷಣದಲ್ಲಿ ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಹೀನಾಯವಾಗಿ ನಿಂದಿಸಿದ್ದಾನೆ. ಇಸ್ಲಾಂ ಧರ್ಮದ ಬಗ್ಗೆ ಮುಸಲ್ಮಾನರ ಮುಂಜಿ, ಮಸೀದಿಯಲ್ಲಿ ಮೊಳಗುವ ಅಝಾನ್ ಬಗ್ಗೆ ಕೀಳಾಗಿ ಮಾತನಾಡಿದ್ದಾನೆ. ಆದರೆ, ಪೊಲೀಸ್ ಇಲಾಖೆ ಮಾತ್ರ ಈ ಪ್ರಕರಣವನ್ನು ಲಘುವಾಗಿ ಪರಿಣಾಮಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸಿಲ್ಲ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‍ಎಂಎ ವಿಟ್ಲ ಝೂನಲ್ ಉಪಾಧ್ಯಕ್ಷ ಉಮರ್ ಬಾಕಿಮಾರ್, ಎಸ್ಸೆಸ್ಸೆಎಫ್ ಜಿಲ್ಲಾ ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ, ಎಸ್‍ಎಂಎ ವಿಟ್ಲ ರಿಜೀನಲ್ ಅಧ್ಯಕ್ಷ  ಹಾಜಿ ಉಸ್ಮಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News