ವಿಟ್ಲ: ಕೆಎಫ್‌ಸಿ ಖಂಡಿಗ ಕ್ರಿಕೆಟ್ ಕ್ಲಬ್ ಉದ್ಘಾಟನೆ

Update: 2018-09-14 13:19 GMT

ವಿಟ್ಲ, ಸೆ.14: ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ನೀರ್ಕಜೆ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ಕೆಎಫ್‌ಸಿ ಖಂಡಿಗ ಕ್ರಿಕೆಟ್ ಕ್ಲಬ್ ಇತ್ತೀಚೆಗೆ ಉದ್ಘಾಟನೆಗೊಂಡಿತು.

ಕಟ್ಟಡದ ಉದ್ಘಾಟನೆಯನ್ನು ಹಿರಿಯ ವ್ಯಕ್ತಿಗಳಾದ ಕಮ್ಮು ಪರಿಯಾಲ್ ಹಾಗೂ ವಿಜಯ್ ಸಾಲಿಯಾನ್ ಜೊತೆಯಾಗಿ ನೆರೆವೇರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವ್ಯಕ್ತಿಗಳಾಗಿ ಯೂಸುಫ್‌ನೀರ್ಕಜೆ, ಇಸ್ಮಾಯೀಲ್ ಖಂಡಿಗ ಮಹಮ್ಮದ್ ಖಂಡಿಗ, ಅಬುಸಾಲಿ ಖಂಡಿಗ, ಇಕ್ಬಾಲ್ ನೀರ್ಕಜೆ, ಹನೀಫ್‌ನೀರ್ಕಜೆ, ನಿಝಮುದ್ದೀನ್ ಖಂಡಿಗ, ಸಕೀರ್ ಖಂಡಿಗ, ಝುಬೈರ್ ಎನ್.ಎಂ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News