ಸೆ.16: ಕೊಂಕಣ ರೈಲ್ವೆ ಸಂಚಾರದಲ್ಲಿ ವ್ಯತ್ಯಯ

Update: 2018-09-14 15:32 GMT

ಉಡುಪಿ, ಸೆ.14: ಕೊಂಕಣ ರೈಲ್ವೆ ಮಾರ್ಗದ ಕಾರವಾರ ಹಾಗೂ ತೋಕೂರು ನಡುವೆ ಸೆ.16ರಂದು ಕೆಲ ಇಂಜಿನಿಯರಿಂಗ್ ಹಾಗೂ ವಿದ್ಯುದ್ದೀಕರಣದ ಕಾಮಗಾರಿ ನಡೆಯಲಿರುವ ಕಾರಣ, ಅಂದು ಈ ಮಾರ್ಗದಲ್ಲಿ ಸಂಚರಿಸುವ ಒಂದು ರೈಲಿನ ಸಂಚಾರವನ್ನು ರದ್ದುಗೊಳಿಸಿದ್ದು, ಇನ್ನೂ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಂಗಳೂರು ಸೆಂಟ್ರಲ್-ಮಡಗಾಂವ್- ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ರೈಲು ನಂ.22636-22635 ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ರದ್ದು ಪಡಿಸಲಾಗಿದೆ.

ರೈಲು ನಂ. 12620 ಮಂಗಳೂರು ಸೆಂಟ್ರಲ್-ಕುರ್ಲಾ ಟರ್ಮಿನಸ್ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ನಿಂದ 2 ಗಂಟೆ 45 ನಿಮಿಷ ತಡವಾಗಿ ಹೊರಡಲಿದೆ.

ರೈಲು ನಂ.56641 ಮಡಗಾಂವ್- ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಅಂಕೋಲ ರೈಲ್ವೆ ನಿಲ್ದಾಣದಲ್ಲಿ 60 ನಿಮಿಷ ನಿಲ್ಲಲಿದೆ. ರೈಲು ನಂ. 12617 ಎರ್ನಾಕುಲಂ-ನಿಝಾಮುದ್ದೀನ್ ‘ಮಂಗಳಾ ಲಕ್ಷದ್ವೀಪ’ ಎಕ್ಸ್‌ಪ್ರೆಸ್ ತೊಕೂರಿನಲ್ಲಿ 20 ನಿಮಿಷ ನಿಲ್ಲಲಿದೆ. ರೈಲು ನಂ.22634 ನಿಝಾಮುದ್ದೀನ್- ತ್ರಿವೆಂಡ್ರಮ್ ಎಕ್ಸ್‌ಪ್ರೆಸ್ ಕುಂದಾಪುರ ರೈಲು ನಿಲ್ದಾಣದಲ್ಲಿ 45 ನಿಮಿಷ ನಿಲ್ಲಲಿದೆ. ರೈಲು ನಂ.02198 ಜಬಲ್‌ಪುರ-ಕೊಯಮತ್ತೂರು ವಿಶೇಷ ರೈಲು ಅಂಕೋಲ ರೈಲು ನಿಲ್ದಾಣದಲ್ಲಿ 70 ನಿಮಿಷ ನಿಲ್ಲಲಿದೆ.

ಸ್ಪಚ್ಛತಾ-ಹೀ-ಸೇವಾ:  ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಕೊಂಕಣ ರೈಲ್ವೆ ಸೆ.15ರಿಂದ ಅ.2ರವರೆಗೆ ಸ್ವಚ್ಛತಾ-ಹಿ-ಸೇವಾ ಪಾಕ್ಷಿಕವನ್ನು ಆಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ಇದಕ್ಕಾಗಿ ರೈಲ್ವೆ ಸಚಿವ ಪಿಯೂಸ್ ಗೋಯೆಲ್‌ರ ಮಾರ್ಗದರ್ಶನದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News