ಮನೋಹರ್ ಪಾರಿಕ್ಕರ್ ತೀವ್ರ ಅಸ್ವಸ್ಥ: ಗೋವಾಕ್ಕೆ ಶೀಘ್ರ ನೂತನ ಮುಖ್ಯಮಂತ್ರಿ

Update: 2018-09-14 16:08 GMT

ಪಣಜಿ, ಸೆ.14: ತೀವ್ರ ಅನಾರೋಗ್ಯಕ್ಕೊಳಗಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಇನ್ನು ಅಧಿಕಾರದಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಶುಕ್ರವಾರ ಸಂಜೆ ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾರಿಕ್ಕರ್ ವಿದೇಶದಲ್ಲಿ ಸುದೀರ್ಘ ಕಾಲ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮರಳಿದ ಅವರು ಮತ್ತೆ ಮುಖ್ಯಮಂತ್ರಿಯ ಕರ್ತವ್ಯ ನಿಭಾಯಿಸುತ್ತಿದ್ದರು. ಅದರ ಗುರುವಾರ ಸಂಜೆ ಮತ್ತೆ ಜ್ವರದಿಂದ ಬಳಲಿದ ಅವರನ್ನು ಕಾಂಡೋಲಿಮ್ ನಲ್ಲಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಅಲ್ಲಿಂದಲೇ ಬಿಜೆಪಿ ರಾಷ್ಟ್ರೀಯ ಮುಖಂಡರಿಗೆ ಮಾಹಿತಿ ನೀಡಿರುವ ಅವರು ಮುಖ್ಯಮಂತ್ರಿ ಹುದ್ದೆಗೆ ಪಕ್ಷ ಬೇರೆ ಅಭ್ಯರ್ಥಿ ಹುಡುಕುವಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಗೋವಾದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಬರಲು ಬಿಜೆಪಿ ಪಾರಿಕ್ಕರ್ ಅವರನ್ನು ಮಹತ್ವದ ರಕ್ಷಣಾ ಇಲಾಖೆಯ ಸಚಿವ ಸ್ಥಾನದಿಂದ ಬಿಡುಗಡೆ ಮಾಡಿ ಗೋವಾಕ್ಕೆ ಕಳಿಸಿತ್ತು.

ಈಗ ಗೋವಾಗೆ ಹೊಸ ಮುಖ್ಯಮಂತ್ರಿ ನೇಮಕ ಮಾಡಲು ಬಿಜೆಪಿ ದೆಹಲಿಯಿಂದ ಸಮಿತಿಯೊಂದನ್ನು ರಾಜ್ಯಕ್ಕೆ ಕಳಿಸಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News