ಉಡುಪಿ: ಗ್ರಾಮೀಣ ಸಂತೆ ಒಕ್ಕೂಟದ ‘ಗ್ರಾಮೀಣ ಸಂತೆ’ಗೆ ಚಾಲನೆ

Update: 2018-09-14 16:43 GMT

ಉಡುಪಿ, ಸೆ.12: ಮಂಗಳೂರಿನ ಗ್ರಾಮೀಣ ಸಂತೆ ಒಕ್ಕೂಟದ ವತಿಯಿಂದ ಶುಕ್ರವಾರ ಪ್ರಾರಂಭಗೊಂಡ ಮೂರು ದಿನಗಳ ‘ಗ್ರಾಮೀಣ ಸಂತೆ’ಗೆ ನಗರದ ಬನ್ನಂಜೆಯಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜನತೆ ಸ್ವತಹ ತಯಾರಿಸಿದ ಉತ್ಪನ್ನಗಳನ್ನು, ಮನೆಗಳಲ್ಲೇ ತಯಾರಿಸಿದ ವೈವಿಧ್ಯಮಯ ವಸ್ತುಗಳನ್ನು, ಸಾವಯವ ಕೃಷಿ ಉತ್ಪನ್ನಗಳನ್ನು ಇಂಥ ಸಂತೆಗಳಲ್ಲಿ ಖರೀದಿಸುವುದರಿಂದ ಸ್ವಉದ್ಯೋಗಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಗ್ರಾಹಕರಿಗೂ ಒಂದೇ ಕಡೆಗಳಲ್ಲಿ ಇವು ಲಭ್ಯವಾಗುವುದರಿಂದ ಪ್ರಯೋಜನವಿದೆ ಎಂದು ರಘುಪತಿ ಭಟ್ ತನ್ನ ಉದ್ಘಾಟನಾ ಮಾತುಗಳಲ್ಲಿ ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಿಲ್ಲವ ಸಂಘದ ಅಧ್ಯಕ್ಷ ಬಿ.ಬಿ. ಪೂಜಾರಿ ಮಾತನಾಡಿ, ಈಗ ಊರ ಸಂತೆಗಳಲ್ಲಿ ಸಿಗುವ ಹೆಚ್ಚಿನ ತರಕಾರಿ, ಹಣ್ಣು ಹಂಪಲುಗಳಲ್ಲಿ ರಸಾಯನಿಕಗಳ ಬಳಕೆ ವ್ಯಾಪಕವಾಗುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ. ಆದರೆ ಗ್ರಾಮೀಣ ಸಂತೆಯಲ್ಲಿ ರಾಸಾಯನಿಕ ರಹಿತವಾದ, ಸಾವಯವ ಕೃಷಿಯಿಂದ ಬೆಳೆದ ತರಕಾರಿ, ಹಣ್ಣುಗಳು ಸಿಗಲಿವೆ. ಗ್ರಾಮೀಣ ಸಂತೆ ಪ್ರಯೋಗ ಯಶಸ್ವಿ ಯಾಗಲಿ ಎಂದು ಶುಭ ಹಾರೈಸಿದರು.

ದ.ಕ.ಜಿಲ್ಲೆಯ ಮಂಗಳೂರು ಹಾಗೂ ಸುರತ್ಕಲ್‌ಗಳಲ್ಲಿ ಯಶಸ್ವಿಯಾಗಿ ನಡೆಸಿದ ಗ್ರಾಮೀಣ ಸಂತೆಯನ್ನು ಇದೀಗ ಉಡುಪಿ ಜಿಲ್ಲೆಗೂ ವಿಸ್ತರಿಸಲು ಬಯಸಿದ್ದು, ಮೂರನೇ ಗ್ರಾಮೀಣ ಸಂತೆ ಇಲ್ಲಿ 14ರಿಂದ 16ರವರೆಗೆ ನಡೆದರೆ ಮುಂದಿನ ವಾರ ಕುಂದಾಪುರದಲ್ಲೂ ಗ್ರಾಮೀಣ ಸಂತೆ ನಡೆಯಲಿದೆ ಎಂದು ಅತಿಥಿಗಳನ್ನು ಸ್ವಾಗತಿಸಿದ ಒಕ್ಕೂಟದ ಗೌರವ ನಿರ್ದೇಶಕ ಲೈನ್ಕಜೆ ರಾಮಚಂದ್ರ ಹೇಳಿದರು. ಉದ್ಯಮಿ ಮನೋಹರ ಶೆಟ್ಟಿ, ಒಕ್ಕೂಟದ ಸದಾಶಿವ ರಾವ್, ಅರವಿನ್ ಡಿಸೋಜ, ಮಹಾವೀರ ಜೈನ್ ಅವರು ಉಪಸ್ಥಿತರಿದ್ದರು.

ದ.ಕ.ಜಿಲ್ಲೆಯ ಮಂಗಳೂರು ಹಾಗೂ ಸುರತ್ಕಲ್‌ಗಳಲ್ಲಿ ಯಶಸ್ವಿಯಾಗಿ ನಡೆಸಿದ ಗ್ರಾಮೀಣ ಸಂತೆಯನ್ನು ಇದೀಗ ಉಡುಪಿ ಜಿಲ್ಲೆಗೂ ವಿಸ್ತರಿಸಲು ಬಯಸಿದ್ದು, ಮೂರನೇ ಗ್ರಾಮೀಣ ಸಂತೆ ಇಲ್ಲಿ 14ರಿಂದ 16ರವರೆಗೆ ನಡೆದರೆ ಮುಂದಿನ ವಾರ ಕುಂದಾಪುರದಲ್ಲೂ ಗ್ರಾಮೀಣ ಸಂತೆ ನಡೆಯಲಿದೆ ಎಂದು ಅತಿಥಿಗಳನ್ನು ಸ್ವಾಗತಿಸಿದ ಒಕ್ಕೂಟದ ಗೌರವ ನಿರ್ದೇಶಕ ಲೈನ್ಕಜೆ ರಾಮಚಂದ್ರ ಹೇಳಿದರು. ಉದ್ಯಮಿ ಮನೋಹರ ಶೆಟ್ಟಿ, ಒಕ್ಕೂಟದ ಸದಾಶಿವ ರಾವ್, ಅರವಿನ್ ಡಿಸೋಜ, ಮಹಾವೀರ ಜೈನ್ ಅವರು ಉಪಸ್ಥಿತರಿದ್ದರು. ಗ್ರಾಮೀಣ ಸಂತೆಯಲ್ಲಿ ಖಾದಿ ಉತ್ಸವ, ಸಿರಿಧಾನ್ಯ ಆಹಾರ ಮೇಳ ದೊಂದಿಗೆ ಸಿರಿಧಾನ್ಯ ಆಹಾರೋತ್ಸವೂ ಇದೆ. ರಾಜ್ಯದ ವಿವಿದೆಡೆಗಳಿಂದ ಬಂದಿರುವ ಕೃಷಿ, ತೋಟಗಾರಿಕಾ ಉತ್ಪನ್ನಗಳು, ಸಾವಯವ ಉತ್ಪನ್ನಗಳ ಮಳಿಗೆಗಳನ್ನು ತೆರೆಯಲಾಗಿದೆ. ಕೇರಳದಿಂದ ವಿಶೇಷವಾದ ಹಲಸಿನ ಐಸ್‌ಕ್ರೀಂ ಸೇರಿದಂತೆ ಹಲಸಿನ ವೌಲ್ಯವರ್ಧಿತ ಆಹಾರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವೂ ನಡೆಯುತ್ತಿದೆ.

ಗ್ರಾಮೀಣ ಸಂತೆಯಲ್ಲಿ ಖಾದಿ ಉತ್ಸವ, ಸಿರಿಾನ್ಯಆಹಾರಮೇಳದೊಂದಿಗೆಸಿರಿಾನ್ಯ ಆಹಾರೋತ್ಸವೂ ಇದೆ. ರಾಜ್ಯದ ವಿವಿದೆಡೆಗಳಿಂದ ಬಂದಿರುವ ಕೃಷಿ, ತೋಟಗಾರಿಕಾ ಉತ್ಪನ್ನಗಳು, ಸಾವಯವ ಉತ್ಪನ್ನಗಳ ಮಳಿಗೆಗಳನ್ನು ತೆರೆಯಲಾಗಿದೆ. ಕೇರಳದಿಂದ ವಿಶೇಷವಾದ ಹಲಸಿನ ಐಸ್‌ಕ್ರೀಂ ಸೇರಿದಂತೆ ಹಲಸಿನ ವೌಲ್ಯವರ್ಧಿತ ಆಹಾರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವೂ ನಡೆಯುತ್ತಿದೆ. ಶ್ರೀಧರ್ಮಸ್ಥಳ ಗ್ರಾಮೋದ್ಯೋಗ ಸಂಘದ ‘ಸಿರಿ’ ಮಳಿಗೆ, ವಿಶೇಷ ಖಾದಿ ಮಳಿಗೆದಾರರು, ಮನೆಯಲ್ಲೇ ತಯಾರಿಸಿದ ಗುಡಿ ಕೈಗಾರಿಕೆಯ ವಿವಿಧ ಉತ್ಪನ್ನಗಳು, ವಸ್ತುಗಳು, ಇಳಕಲ್‌ನ ವಿಶಿಷ್ಟ ಸೀರೆಗಳು, ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಇಲ್ಲಿದೆ ಎಂದು ಲೈನ್ಕಜೆ ರಾಮಚಂದ್ರ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News