ಬ್ರಹ್ಮಾವರ ಬಿಇಒ ವರ್ಗಾವಣೆಗೆ ಕೆಎಟಿಯಿಂದ ತಡೆ; ಶಿಕ್ಷಕರ ಸ್ವಾಗತ

Update: 2018-09-14 16:44 GMT

ಉಡುಪಿ, ಸೆ.14: ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಇವರನ್ನು ಉಡುಪಿ ಶಾಸಕರ ಗಮನಕ್ಕೂ ತಾರದೇ, ರಾಜಕೀಯ ಪ್ರೇರಿತ ವಾಗಿ ಅವಧಿ ಪೂರ್ವದಲ್ಲೇ ಡಯಟ್‌ಗೆ ವರ್ಗಾವಣೆ ಮಾಡಿರುವುದಕ್ಕೆ ಕೆಎಟಿ ತಡೆಯಾಜ್ಞೆ ನೀಡಿದೆ. ಕೆಎಟಿಯ ಈ ತೀರ್ಪನ್ನು ಜಿಲ್ಲಾ ಮುಖ್ಯ ಶಿಕ್ಷಕರ ಸಂಘ ಸ್ವಾಗತಿಸಿದೆ.

ಲೋಕೇಶ್ ಅವರು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿ ಕೊಂಡ ಬಳಿಕ ಶಿಕ್ಷಕರ ಗುರುಸ್ಪಂದನ ನಡೆಸಿ ಎಲ್ಲಾ ಶಿಕ್ಷಕರ ಸೇವಾ ದಾಖಲೆಗಳನ್ನು ಸರಿಪಡಿಸಿದ್ದಲ್ಲದೇ, ಶಿಕ್ಷಣ ವೈಯಕ್ತಿಕ ಸಮಸ್ಯೆಗಳಿಗೂ ಕ್ಲಪ್ತ ಸಮಯದಲ್ಲಿ ಪರಿಹಾರ ನೀಡಿದ್ದರು.

ಇಂಥ ದಕ್ಷ, ಪ್ರಾಮಾಣಿಕ, ಕ್ರಿಯಾಶೀಲ ಬಿಇಓರನ್ನು ಕೆಲವರು ಕುತಂತ್ರ ನಡೆಸಿದ ರಾಜಕೀಯ ಪ್ರೇರಿತರಾಗಿ ಕಾನೂನುಬಾಹಿರವಾಗಿ ಮಾಡಿರುವ ವರ್ಗಾವಣೆಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಟಿ) ತಡೆಯಾಜ್ಞೆ ನೀಡಿದೆ ಎಂದು ಮುಖ್ಯ ಶಿಕ್ಷಕರ ಸಂಘ ಹೇಳಿದೆ.

ಲೋಕೇಶ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಇದೇ ಹುದ್ದೆಯಲ್ಲಿ ಮುಂದುವರಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಮತ್ತು ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಅಧ್ಯಕ್ಷ ಸುಂದರ್ ಮಾಸ್ತರ್ ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News