ಮಗುವಿನ ಚಿಕಿತ್ಸೆಗೆ ನೆರವಾಗಲು ಮನವಿ

Update: 2018-09-14 17:30 GMT

ಮಂಗಳೂರು, ಸೆ.14: ಕೊಡಗು ಜಿಲ್ಲೆಯ ಮಕ್ಕಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಹಂಗೇರಿ ಪೈಸಾರಿ ನಿವಾಸಿ ನಂದಕುಮಾರ್ ಮತ್ತು ರುಕ್ಮಿಣಿ ದಂಪತಿಯ ಒಂದು ವರ್ಷ ಎಂಟು ತಿಂಗಳ ಪ್ರಾಯದ ತಸ್ಮಯ ಎಂಬ ಮಗು ಸೆ.1ರಿಂದ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತಲೆಯಲ್ಲಿ ನೀರು ತುಂಬಿಕೊಂಡಿರುವುದು (Ventriculo Peritoneal and Cystoperitoneal Shunt) ಇದರಿಂದ ಬಳಲುತ್ತಿದ್ದು ಚಿಕಿತ್ಸೆಗೆ ಒಂದು ಲಕ್ಷ ರೂ. ತಗುಲಲಿದೆ ಎಂದು ಅಂದಾಜಿಸಲಾಗಿದೆ.

ಈ ಕುಟುಂಬಕ್ಕೆ ಅಷ್ಟೊಂದು ಮೊತ್ತವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಇವರು ಮಕ್ಕಂದೂರು ಗ್ರಾಪಂ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಪರಿಹಾರ (ಗಂಜಿ)ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಸದ್ಯ ಈ ಮಗು ಮಂಗಳೂರು ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಚಿಕಿತ್ಸೆಗಾಗಿ ಹಣ ಹೊಂದಿಸುವುದು ಮತ್ತು ಹೆಂಡತಿ ಮಕ್ಕಳ ಜೀವನ ನಿರ್ವಹಣೆ ಹೊಣೆಯಿಂದ ನಂದಕುಮಾರ್ ಜರ್ಝರಿತಗೊಂಡಿದ್ದು, ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಆಸಕ್ತರು ನಂದಕುಮಾರ್, ಕೆನರಾ ಬ್ಯಾಂಕ್, ಉಳಿತಾಯ ಖಾತೆ ಸಂಖ್ಯೆ 1555101002788, ಐಎಫ್‌ಎಸ್‌ಸಿ ಕೋಡ್: ಸಿಎನ್‌ಆರ್‌ಬಿ 0001555 ಇದಕ್ಕೆ ಹಣ ಜಮೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ನಂ.: 9482902805ನ್ನು ಸಣಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News