ಪ್ರತಿಭಾ ಕಾರಂಜಿ: ಹೂಡೆ ಸಾಲಿಹಾತ್ ಶಾಲೆಗೆ ಪ್ರಶಸ್ತಿ

Update: 2018-09-15 12:49 GMT

ಉಡುಪಿ, ಸೆ.15: ಕೊಕ್ಕರ್ಣೆ ಸರಕಾರಿ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ಬ್ರಹ್ಮಾವರ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೂಡೆಯ ಸಾಲಿಹಾತ್ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಫೈಝಲ್ ಅಹ್ಮದ್ ಪ್ರಥಮ, ಉರ್ದು ಕಂಠಪಾಠದಲ್ಲಿ ಜೋಹರಿನ್ ಪ್ರಥಮ, ಕವ್ವಾಲಿ ಯಲ್ಲಿ ಅಝ್‌ಲಿನ್ ಮತ್ತು ಬಳಗ ದ್ವಿತೀಯ, ಹಿರಿಯ ಪ್ರಾಥಮಿಕ ವಿಭಾಗದ ಉರ್ದು ಕಂಠಪಾಠದಲ್ಲಿ ಹುಜೈಫಾ ಪ್ರಥಮ, ಕವ್ವಾಲಿಯಲ್ಲಿ ಆಯಿಷಾ ಶಾರೀಕಾ ಮತ್ತು ಬಳಗ ಪ್ರಥಮ, ಚಿತ್ರಕಲೆಯಲ್ಲಿ ಸಲ್ಮಾ ದ್ವಿತೀಯ, ಪ್ರೌಢ ಶಾಲಾ ವಿಭಾಗದ ಗಝಲ್‌ನಲ್ಲಿ ಹಲೀಮಾ ಸೌದಾ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News