ಮಕ್ಕಳು ಬಯಸುವ ಶಿಕ್ಷಣ ನೀಡಿ: ಹೆತ್ತವರಿಗೆ ಸಚಿವೆ ಕಿವಿಮಾತು

Update: 2018-09-15 15:13 GMT

ಉಡುಪಿ, ಸೆ.15: ಪ್ರತಿಯೊಬ್ಬ ಹೆತ್ತವರು ತಮ್ಮ ಮಕ್ಕಳಿಗೆ ಅವರು ಇಷ್ಟ ಪಡುವ ಶಿಕ್ಷಣವನ್ನು ನೀಡುವ ಮೂಲಕ ಅವರ ಭವಿಷ್ಯವನ್ನು ರೂಪಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಉಡುಪಿ ಜಿಲ್ಲಾ ಉ್ತುವಾರಿ ಸಚಿವೆ ಜಯಮಾಲ ಹೇಳಿದ್ದಾರೆ.

ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಜಿಲ್ಲೆಯಾದ್ಯಂತ ಚಿಣ್ಣರ ಸಂತರ್ಪಣೆಯ ಶಾಲೆಗಳಲ್ಲಿ ನಡೆದ ಶ್ರೀಕೃಷ್ಣಾಷ್ಟಮಿ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಶನಿವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಹೆತ್ತವರು ತಮ್ಮ ಕಷ್ಟ, ಹೊರೆ, ಆಶೆ ಹಾಗೂ ಕನಸುಗಳನ್ನು ಮಕ್ಕಳ ಮೇಲೆ ಹೇರುವುದು ಸರಿಯಲ್ಲ. ಮಕ್ಕಳ ಆಶೆ, ಆಕಾಂಕ್ಷೆಗಳನ್ನು ಅವರ ಬಳಿಯೇ ಕೇಳಿ ತಿಳಿದು ಅದನ್ನು ಈಡೇರಿಸಲು ಪ್ರಯತ್ನಿಸಿ. ಹೆತ್ತವರ ಆಶೆ, ಒತ್ತಡಗಳಿಗೆ ಮಣಿದು ಅದೆಷ್ಟೋ ಮಕ್ಕಳು ಖಿನ್ನತೆಗೆ ಒಳಗಾಗಿರುವ ಉದಾಹರಣೆಗಳಿವೆ. ಆದುದರಿಂದ ಅವರಿಗೆ ಇಷ್ಟದ ಶಿಕ್ಷಣವನ್ನು ನೀಡಲು ಪ್ರಯತ್ನಿಸಿ ಎಂದು ಜಯಮಾಲ ಹೆತ್ತವರಿಗೆ ಕಿವಿಮಾತು ಹೇಳಿದರು.

ಹೆತ್ತವರು ತಮ್ಮ ಕಷ್ಟ, ಹೊರೆ, ಆಶೆ ಹಾಗೂ ಕನಸುಗಳನ್ನು ಮಕ್ಕಳ ಮೇಲೆ ಹೇರುವುದು ಸರಿಯಲ್ಲ. ಮಕ್ಕಳ ಆಶೆ, ಆಕಾಂಕ್ಷೆಗಳನ್ನು ಅವರ ಬಳಿಯೇ ಕೇಳಿ ತಿಳಿದು ಅದನ್ನು ಈಡೇರಿಸಲು ಪ್ರಯತ್ನಿಸಿ. ಹೆತ್ತವರ ಆಶೆ, ಒತ್ತಡಗಳಿಗೆ ಮಣಿದು ಅದೆಷ್ಟೋ ಮಕ್ಕಳು ಖಿನ್ನತೆಗೆ ಒಳಗಾಗಿರುವ ಉದಾಹರಣೆಗಳಿವೆ.

ಆದುದರಿಂದ ಅವರಿಗೆ ಇಷ್ಟದ ಶಿಕ್ಷಣವನ್ನು ನೀಡಲು ಪ್ರಯತ್ನಿಸಿ ಎಂದು ಜಯಮಾಲ ಹೆತ್ತವರಿಗೆ ಕಿವಿಮಾತು ಹೇಳಿದರು. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ವಿಜೇತ ಪುಟಾಣಿಗಳಿಗೆ ಬಹುಮಾನ ಗಳನ್ನು ವಿತರಿಸಿದರು.

ಮಠದ ದಿವಾನರಾದ ವೇದವ್ಯಾಸ ತಂತ್ರಿಗಳು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾಡ ಮತ್ತು ಚಿಣ್ಣರ ಸಂತರ್ಪಣೆ ಕಾರ್ಯದರ್ಶಿ ಶ್ರೀನಿವಾ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News