ಮಣಿಪಾಲ: ಮೈಕ್ರೋಫೈನಾನ್ಸ್ ಕುರಿತು ಕಾರ್ಯಾಗಾರ

Update: 2018-09-15 15:17 GMT

ಮಣಿಪಾಲ, ಸೆ.15: ಮಣಿಪಾಲ ಸ್ಕೂಲ್ ಆಫ್ ಮ್ಯಾನೆಜ್‌ಮೆಂಟ್ನ ದಿ ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ಇನ್ ಫೈನಾನ್ಸಿಯಲ್ ಇನ್‌ಕ್ಲ್ಲೂಷನ್ ಮತ್ತುಮಣಿಪಾಲ ಸಿಂಡಿಕೇಟ್ ಬ್ಯಾಂಕ್‌ಗಳ ಸಹಯೊಗದಲ್ಲಿ ‘ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ರೂಪಾಂತರ ಮಾಡಲು ಪರಿಣಾಮಕಾರಿ ನಿರ್ವಹಣೆ ಕೌಶಲ್ಯಗಳು’ ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಶನಿವಾರ ಸ್ಕೂಲ್ ಆಫ್ ಮ್ಯಾನೆಜ್‌ಮೆಂಟ್ನಲ್ಲಿ ಆಯೋಜಿಸಲಾಗಿತ್ತು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಣಿ ಪಾಲ ಸಿಂಡಿಕೇಟ್ ಬ್ಯಾಂಕಿನ ಉಪ ಮಹಾಪ್ರಬಂಧಕ ಬಿ.ಆರ್.ಹಿರೇಮಠ್ ಮೈಕ್ರೋಫೈನಾನ್ಸ್‌ನಲ್ಲಿ ಗ್ರಾಹಕರ ಸಂಬಂಧ ನಿರ್ವಹಣೆಯ ಪ್ರಮುಖ ಪಾತ್ರದ ಕುರಿತು ಮಾತನಾಡಿದರು.

ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಗ್ರೇಸಿ ಗೊನ್ಸಾಲಿಸ್, ಸ್ತ್ರೀ ಶಕ್ತಿ ಸದಸ್ಯರಿಗೆ ಸಂವಹನ ಕೌಶಲ್ಯ ಮತ್ತು ಸಂಪರ್ಕದ ಕುರಿತು ಮಾಹಿತಿ ನೀಡಿದರು. ಡಾ.ಕೆ.ವಿ.ಎಂ.ವಾರಂಬಳ್ಳಿ ಮಾತನಾ ಡಿದರು. ಸಂಶೋಧನಾ ಕೇಂದ್ರದ ಸಂಯೋಜಕಿ ಡಾ.ಸವಿತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News