ಸೆ.16ರಂದು ಕಾರ್ಟೂನ್ ಪ್ರದರ್ಶನ -ಮರಳು ಶಿಲ್ಪರಚನೆ
Update: 2018-09-15 20:48 IST
ಉಡುಪಿ, ಸೆ.15: ಉಡುಪಿ ಜಿಲ್ಲಾ ಪೊಲೀಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್‌ಕ್ಲಬ್ ಸಹಯೋಗದಲ್ಲಿ ಮಾದಕ ವ್ಯಸನ ಮಾಸಾಚರಣೆ ಅಂಗವಾಗಿ ವ್ಯಂಗ್ಯಚಿತ್ರ ಪ್ರದರ್ಶನ ಮತ್ತು ಮರಳು ಶಿಲ್ಪರಚನೆ ಕಾರ್ಯಕ್ರಮವನ್ನು ಸೆ.16ರಂದು ಸಂಜೆ ನಾಲ್ಕು ಗಂಟೆಗೆ ಮಲ್ಪೆ ಕಡಲ ಕಿನಾರೆಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿ ಕಾಂತೆ ಗೌಡ ಉದ್ಘಾಟಿಸಲಿರುವರು. ಕಲಾವಿದರಾದ ಹರೀಶ ಸಾಗ, ಸುನೀಲ್ ಪರ್ಕಳ ಮರಳು ಶಿಲ್ಪ ರಚಿಸಲಿದ್ದು, ಜೇಮ್ಸ್ ವಾಜ್, ಜೀವನ್ ಶೆಟ್ಟಿ ಹಾಗೂ ಉಡುಪಿ ಚಿತ್ರಕಲಾ ಮಂದಿರದ ವಿದ್ಯಾರ್ಥಿಗಳು ಕಾರ್ಟೂನ್ ಹಬ್ಬದಲ್ಲಿ ಪಾಲ್ಗೊಳ್ಳ ಲಿರುವರು ಎಂದು ಪ್ರಕಟಣೆ ತಿಳಿಸಿದೆ.