ವರದಕ್ಷಿಣೆ ಕಿರುಕುಳ: ದೂರು
Update: 2018-09-15 20:57 IST
ಮಲ್ಪೆ, ಸೆ.15: ಪತಿಯ ಮನೆಯವರು ವರದಕ್ಷಿಣೆ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವ ಬಗ್ಗೆ ಬಡಾನಿಡಿಯುರು ಗ್ರಾಮದ ಹೊಸಹಿತ್ಲುವಿನ ಮಮತ(25) ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರು 2017ರ ನ.26ರಂದು ಹೊಸಹಿತ್ಲುವಿನ ರಮೇಶ ಮಂಜುನಾಥ ಆಚಾರ್ಯ ಎಂಬವರೊಂದಿಗೆ ವಿವಾಹವಾಗಿದ್ದು, ನಂತರದ ದಿನಗಳಲ್ಲಿ ಮಾವ ಮಂಜುನಾಥ ಆಚಾರ್ಯ, ಅತ್ತೆ ರೇಣುಕಾ ಮಂಜುನಾಥ ಆಚಾರ್ಯ ಸೇರಿ ತವರು ಮನೆಯಿಂದ ಬಂಗಾರದ ಒಡವೆ ಹಾಗೂ ಹಣವನ್ನು ತೆಗೆದುಕೊಂಡು ಬರುವಂತೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಮತ್ತು ಕೈಯಿಂದ ಹೊಡೆದು ಮನೆಯಿಂದ ಹೊರ ಹಾಕಿ ಬೆದರಿಕೆಯೊಡ್ಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.