ತುಳು ಭಾಷಾ ಕಲಿಕಾ ತರಗತಿ ಉದ್ಘಾಟನೆ
ಮಂಗಳೂರು, ಸೆ.15: ಉದ್ಯೋಗ ನಿಮಿತ್ತ ಮಂಗಳೂರಿಗೆ ಬಂದ ತಾನು ಕನ್ನಡಿಗನಾಗಿದ್ದರೂ ಕೂಡಾ ತುಳು ಭಾಷೆಯನ್ನು ಕಲಿತೆ. ಇದರಿಂದ ತುಳುನಾಡಿನ ಸಂಸ್ಕೃತಿಯ ಪರಿಚಯವೂ ಆಗಿದೆ ಎಂದು ಸಾಹಿತಿ ಕೇಶವ ಕುಡ್ಲ ಅಭಿಪ್ರಾಯಪಟ್ಟರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಆಶ್ರಯದಲ್ಲಿ ತುಳುಚಾವಡಿಯಲ್ಲಿ ನಡೆದ ತುಳುಭಾಷಾ ಕಲಿಕಾ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುಳುವರು ಹೊರಜಿಲ್ಲೆ-ಹೊರನಾಡಿನವರೊಂದಿಗೆ ಪ್ರೀತಿಯಿಂದ ಬೆರೆಯುತ್ತಾರೆ. ನಿರಂತರವಾಗಿ ತುಳು ಮಾತನಾಡುವುದರಿಂದ ಎಲ್ಲರಿಗೂ ತುಳುಭಾಷೆ ಕಲಿಯಲು ಸಾಧ್ಯ ಎಂದ ಕೇಶವ ಕುಡ್ಲ ಹೇಳಿದರು.
ಮೂಡುಬಿದಿರೆಯ ಧವಳಾ ಕಾಲೇಜಿನ ಗ್ರಂಥಾಲಯ ಸಹಾಯಕ ಕೊಟ್ರಯ್ಯ ಐ.ಎಂ. ತುಳುವಿನಲ್ಲಿ ಗ್ರಂಥರಚನೆಯ ಬಗ್ಗೆ ಮಾಹಿತಿ ನೀಡಿದರು.
ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಉಪಸ್ಥಿತರಿದ್ದರು. ಅಕಾಡಮಿಯ ಸದಸ್ಯ ಎ.ಶಿವಾನಂದ ಕರ್ಕೇರ ಸ್ವಾಗತಿಸಿದರು. ಸುಧಾ ನಾಗೇಶ್ ವಂದಿಸಿದರು. ತುಳು ಲಿಪಿ ಶಿಕ್ಷಕಿ ವಿದ್ಯಾಶ್ರಿ ಎಸ್. ಕಾರ್ಯಕ್ರಮ ನಿರೂಪಿಸಿದರು.