ದೇಶದ ಮೊದಲ ನೀರಿನಾಳದಲ್ಲಿ ಚಲಿಸುವ ಡ್ರೋಣ್ ಕೇರಳದ ಸಂಸ್ಥೆಯಿಂದ ಅಭಿವೃದ್ಧಿ

Update: 2018-09-15 15:50 GMT

ಕೊಚ್ಚಿ, ಸೆ. 15: ಭಾರತದ ಮೊದಲ ನೀರಿನೊಳಗೆ ಚಲಿಸುವ ರೊಬೋಟಿಕ್ ಡ್ರೋನ್ ಅನ್ನು ಕೊಚ್ಚಿಯ ‘ಐರೋವ್ ಟಿಕ್ನಾಲಡೀಸ್’ ಅಭಿವೃದ್ಧಿಗೊಳಿಸಿದೆ. ನೀರಿನಾಳದಲ್ಲಿರುವ ಹಡಗು ಹಾಗೂ ರಚನೆಗಳ ದುರಸ್ಥಿ ಹಾಗೂ ನಿರ್ವಹಣೆಗೆ ಇದು ನೆರವಾಗಲಿದೆ. ಈ ರೋಬಟಿಕ್ ಡ್ರೋನ್ ಅನ್ನು ಶುಕ್ರವಾರ ಲೋಕರ್ಪಾಣೆಗೊಳಿಸಲಾಯಿತು. ಇದನ್ನು ಡಿಆರ್‌ಡಿಒದ ನವಲ್ ಫಿಸಿಕಲ್ ಆ್ಯಂಡ್ ಓಶಿಯನೋಗ್ರಫಿ ಲ್ಯಾಬೊರೇಟರಿಗೆ ಹಸ್ತಾಂತರಿಸಲಾಯಿತು.

ವಾಣಿಜ್ಯವಾಗಿ ಮೊದಲ ಭಾರಿ ಅಭಿವೃದ್ಧಿಗೊಳಸಲಾದ ರಿಮೋಟ್ ಕಂಟ್ರೋಲ್‌ನಲ್ಲಿ ನಿರ್ವಹಿಸಬಹುದಾದ ನೀರಿನ ಅಡಿ ಚಲಿಸುವ ಡ್ರೋನ್ ‘ಐರೋವ್‌ಟುನಾ’ವನ್ನು ‘ಐರೋವ್ ಟೆಕ್ನಾಲಜಿ’ ರೂಪಿಸಿದೆ. ಐಆರ್‌ಡಿಒದ ದಿಲ್ಲಿ ಕೇಂದ್ರ ಕಚೇರಿಯ ಎನ್‌ಪಿಒಎಲ್ ಲ್ಯಾಬೊರೇಟರಿ ಈ ಉತ್ಪಾದನೆಯನ್ನು ಮೊದಲು ಖರೀದಿಸಿದೆ. ಐರೋವ್ ಉತ್ಪಾದನೆಯ ಅಭಿವೃದ್ಧಿಗೆ ಕೇರಳದ ಸ್ಮಾರ್ಟ್ ಅಪ್ ಯೋಜನೆಯ ಹಲವು ಕಾರ್ಯಕ್ರಮಗಳ ಮೂಲಕ ಬೆಂಬಲ ನೀಡಲಾಗಿತ್ತು. ಈ ಡ್ರೋನ್ ಅನ್ನು ಎನ್‌ಪಿಒಎಲ್ ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಕೆಯಾಗಲಿದೆ. ಈ ಡ್ರೋನ್ ಅನ್ನು ‘ಐರೋವ್’ನ ಜೋನ್ಸ್ ಟಿ. ಮಥಾಯಿ ಹಾಗೂ ಕಣ್ಣಪ್ಪ ಪಳನಿಯಪ್ಪ ಅಭಿವೃದ್ಧಿಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News