ಕುಲ್ಸೂಮ್ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಜನರು ಭಾಗಿ

Update: 2018-09-15 15:51 GMT

ಇಸ್ಲಾಮಾಬಾದ್, ಸೆ. 15: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಪತ್ನಿ ಕುಲ್ಸುಮ್ ನವಾಝ್‌ರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಲಾಹೋರ್‌ನ ಹೊರವಲಯದ ಜತಿ ಉಮ್ರದಲ್ಲಿರುವ ಶರೀಫ್ ಕುಟುಂಬದ ಮನೆಯ ಸಮೀಪ ನಡೆಯಿತು.

ಈ ಸಂದರ್ಭದಲ್ಲಿ ಸಾವಿರಾರು ಮಂದಿ ಉಪಸ್ಥಿತರಿದ್ದರು.

ಅಂತ್ಯಸಂಸ್ಕಾರ ಪ್ರಾರ್ಥನೆಗಾಗಿ ಜತಿ ಉಮ್ರ ಸಮೀಪದ ಶರೀಫ್ ಮೆಡಿಕಲ್ ಸಿಟಿಗೆ ಕುಲ್ಸೂಮ್‌ರ ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗಲಾಯಿತು. ಆ್ಯಂಬುಲೆನ್ಸನ್ನು ಶರೀಫ್ ಸ್ವತಃ ವಾಹನವೊಂದನ್ನು ಚಲಾಯಿಸುತ್ತಾ ಹಿಂಬಾಲಿಸಿದರು.

ಉನ್ನತ ರಾಜಕಾರಣಿಗಳು, ಶರೀಫ್‌ರ ಪಿಎಂಎಲ್-ಎನ್ ಪಕ್ಷದ ಸಾವಿರಾರು ಬೆಂಬಲಿಗರು ಹಾಗೂ ಹಿತೈಷಿಗಳು ಈ ಸಂದರ್ಭದಲ್ಲಿ ಇದ್ದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ 68 ವರ್ಷದ ಕುಲ್ಸೂಮ್ ಸೆಪ್ಟಂಬರ್ 11ರಂದು ಲಂಡನ್‌ನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News