ಮಿತ್ರ ದೇಶಗಳ ವ್ಯಾಪ್ತಿ ಹಿಗ್ಗಿಸುತ್ತಿರುವ ತೈವಾನ್
Update: 2018-09-15 21:46 IST
ತೈಪೆ (ತೈವಾನ್), ಸೆ. 15: ತೈವಾನನ್ನು ರಾಜತಾಂತ್ರಿಕವಾಗಿ ಇನ್ನಷ್ಟು ಮೂಲೆಗುಂಪು ಮಾಡುವ ತನ್ನ ಪ್ರಯತ್ನಗಳನ್ನು ಚೀನಾ ಮುಂದುವರಿಸುತ್ತಿರುವಂತೆಯೇ, ತೈವಾನ್ ಕೂಡ ತನ್ನ ಮಿತ್ರ ದೇಶಗಳ ವ್ಯಾಪ್ತಿಯನ್ನು ಹಿಗ್ಗಿಸಲು ಸಕ್ರಿಯ ಪ್ರಯತ್ನಗಳನ್ನು ನಡೆಸುತ್ತಿದೆ.
ಅಮೆರಿಕದೊಂದಿಗಿನ ಸುದೀರ್ಘ ಬಾಂಧವ್ಯಕ್ಕೆ ಹೊರತಾಗಿ, ಇತರ ಪ್ರಾದೇಶಿಕ ಶಕ್ತಿಗಳೊಂದಿಗೂ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಳ್ಳಲು ತೈವಾನ್ ಮುಂದಾಗಿದೆ.
ಈ ನಿಟ್ಟಿನಲ್ಲಿ ಅದು ಚೀನಾ ಸೇನೆಯ ಕುರಿತ ಗುಪ್ತಚರ ಮಾಹಿತಿಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲು ಹಾಗೂ ಸಬ್‌ಮರೀನ್ ಕಾರ್ಯಕ್ರಮದಲ್ಲಿ ಜಪಾನೀ ಪರಿಣತರನ್ನು ತೊಡಗಿಸಿಕೊಳ್ಳಲು ಮುಂದಾಗಿದೆ.
ಅದೇ ವೇಳೆ, ಆಸ್ಟ್ರೇಲಿಯ ಮತ್ತು ಸಿಂಗಾಪುರಗಳೊಂದಿಗೆ ಸ್ನೇಹ ಏರ್ಪಡಿಸಿಕೊಳ್ಳುವ ನಿಟ್ಟಿನಲ್ಲಿಯೂ ಅದು ಪ್ರಯತ್ನಗಳನ್ನು ಮಾಡುತ್ತಿದೆ.