ಕಬಡ್ಡಿ ಪಂದ್ಯಾಟ: ಮನ್-ಶರ್ ಸ್ಕೂಲ್ ವಿದ್ಯಾರ್ಥಿ ಮುಹಮ್ಮದ್ ಹಾಶಿರ್ ರಾಜ್ಯ ಮಟ್ಟಕ್ಕೆ ಆಯ್ಕೆ
Update: 2018-09-15 22:57 IST
ಬೆಳ್ತಂಗಡಿ, ಸೆ. 15: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಂಟ್ವಾಳ ಹಾಗೂ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸುರಿಬೈಲು ಇದರ ಜಂಟಿ ಆಶ್ರಯದಲ್ಲಿ ನಡೆದ ಮೈಸೂರು ವಿಭಾಗಿಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟದಲ್ಲಿ ಮನ್-ಶರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೇರುಕಟ್ಟೆ ವಿದ್ಯಾರ್ಥಿ ಮುಹಮ್ಮದ್ ಹಾಶಿರ್ ಮದ್ದಡ್ಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದಲ್ಲದೆ ಉತ್ತಮ ಕ್ಯಾಚರ್ ಪ್ರಶಸ್ತಿಯ ಜೊತೆಗೆ ಉತ್ತಮ ಮುನ್ನಡೆಯ ಆಟಗಾರ ಎಂಬ ನೆಲೆಯಲ್ಲಿ ಸಾವಿರ ರೂ. ನಗದನ್ನು ತನ್ನದಾಗಿಸಿಕೊಂಡಿದ್ದಾನೆ.
ಸೆ.19 ಮತ್ತು 20ರಂದು ಧಾರವಾಡದಲ್ಲಿ ನಡೆಯುವ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿದ್ಯಾರ್ಥಿಯು ಸ್ಪರ್ಧಾರ್ಥಿಯಾಗಿ ಭಾಗವಹಿಸಲಿದ್ದು, ಮನ್-ಶರ್ ಇಂಗ್ಲಿಷ್ ಮೀಡಿಯಂ ದೈಹಿಕ ಶಿಕ್ಷಕ ಮೊಹಮ್ಮದ್ ಆಶಿಕ್ ಮಡಂತ್ಯಾರ್ ಅವರಿಂದ ತರಬೇತು ಪಡೆದಿದ್ದು ದಿ. ಇಮ್ತಿಯಾಝ್ ಹಾಗೂ ಆಮಿನಮ್ಮ ಮದ್ದಡ್ಕ ದಂಪತಿಯ ಪುತ್ರ.