ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಇಂಜಿನಿಯರ್ಸ್ ದಿನಾಚರಣೆ

Update: 2018-09-16 11:36 GMT

ಮಂಗಳೂರು, ಸೆ.16: ಸುರತ್ಕಲ್ ಸಮೀಪದ ಮುಕ್ಕದಲ್ಲಿರುವ ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಲಾಜಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಸೃಷ್ಟಿಕ ವಿದ್ಯಾರ್ಥಿ ಸಂಘಟನೆಯು ಇಂಜಿನಿಯರ್ಸ್ ಡೇ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರಿನ ಹೆಸರಾಂತ ಮಾಸ್ಟರ್ ಪ್ಲಾನರಿ ಸಂಸ್ಥೆಯ ಮುಖ್ಯಸ್ಥ ಹಿರಿಯ ಸಿವಿಲ್ ಇಂಜಿನಿಯರ್ ಆನಂದಕುಮಾರ್ ಮತ್ತು ಮಂಗಳೂರಿನ ಖ್ಯಾತ ಸಂಸ್ಥೆ ಮರಿಯನ್‌ನ ಆಡಳಿತ ನಿರ್ದೇಶಕ ಸಿವಿಲ್ ಇಂಜಿನಿಯರ್ ಉಜ್ವಲ್ ಡಿಸೋಜ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.

ಕಾಲೇಜಿನ ಮುಖ್ಯಸ್ಥ ಡಾ.ಬಿ.ಶ್ರೀಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ರಾಮಕೃಷ್ಣ ಹೆಗಡೆ, ಸೃಷ್ಠಿಕ 2018-19ನೇ ಸಾಲಿನ ಸಂಯೋಜಕ ರವಿಕಿರಣ್ ಸುವರ್ಣ ಮತ್ತು ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಯೋಜಕ ಡಾ.ಪ್ರವೀಣ್ ಬಿ.ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೃಷ್ಟಿಕ ಸಲಹೆಗಾರರಾದ ಪ್ರೊ.ಶ್ರೀನಾಥ್ ರಾವ್ ಕೆ. ಮತ್ತು ಡಾ. ನಾಗರಾಜ್, ಮಾಸ್ಟರ್ ಪ್ಲಾನರಿ ಸಂಸ್ಥೆಯ ಇಂಜಿನಿಯರ್‌ಗಳಾದ ಅರ್ಜುನ್ ಮತ್ತು ಆಕಾಶ್, ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರು-ವಿದ್ಯಾರ್ಥಿಗಳು ಮತ್ತು ಸೃಷ್ಟಿಕ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭ ಕಳೆದ 30 ವರ್ಷಗಳಿಗೂ ಮೀರಿದ ಅವಧಿಯಿಂದ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಇಬ್ಬರು ಮುಖ್ಯ ಅತಿಥಿಗಳನ್ನು ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಸೃಷ್ಟಿಕ ವತಿಯಿಂದ ಸನ್ಮಾನಿಸಲಾಯಿತು.

ಇಂಜಿನಿಯರ್ಸ್ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಸರ್ ಎಂ.ವಿಶ್ವೇಶ್ವರಯ್ಯ ಭಾವಚಿತ್ರ ರಚನೆ ಹಾಗೂ ಅವರ ಸಾಧನೆಗಳ ಕಿರು ಸಾಕ್ಷಚಿತ್ರ ನಿರ್ಮಾಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಡಾ.ರಾಮಕೃಷ್ಣ ಹೆಗಡೆ ಸನ್ಮಾನ ಪತ್ರವನ್ನು ವಾಚಿಸಿದರು. ರವಿಕಿರಣ್ ಸುವರ್ಣ ಸ್ವಾಗತಿಸಿದರು. ಕಲಾವಿದೆ ನಯನಾ ಕಣ್ಣನ್ ಪ್ರಾರ್ಥಿಸಿದರು. ಪ್ರಸನ್ನ ರಾವ್ ಹಾಗೂ ಶಿಲ್ಪಾ ಅತಿಥಿಗಳನ್ನು ಪರಿಚಯಿಸಿದರು. ಅನುಷಾ ಮಚಾದೋ ಮತ್ತು ನಯನಾ ಕಣ್ಣನ್ ಕಾರ್ಯಕ್ರಮ ನಿರೂಪಿಸಿದರು. ಭವಾನಿ ಶಂಕರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News