ಅನುಷ್ ಬೇಕಲ್‌ಗೆ ಡಾಕ್ಟರೇಟ್ ಪದವಿ

Update: 2018-09-16 11:40 GMT

ಮಂಗಳೂರು, ಸೆ.16: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅನುಶ್ ಬೇಕಲ್ ಅಹ್ಮದಾಬಾದ್ (ಐಐಐಟಿ-ಎ) ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ನಡೆದ 13ನೇ ಸಮಾವೇಶದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಅವರ ಪಿಎಚ್‌ಡಿ ಪ್ರಬಂಧದ ಶೀರ್ಷಿಕೆಯು ಐಐಐಟಿ-ಎ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ (ಮೈಕ್ರೋಎಲೆಕ್ಟ್ರಾನಿಕ್ಸ್ ವಿಭಾಗ) ಇಲಾಖೆಯ ಡಾ.ಮನೀಶ್ ಗೋಸ್ವಾಮಿ, ಅಸೋಸಿಯೇಟ್ ಪ್ರಾಧ್ಯಾಪಕ ಮತ್ತು ಎಚ್‌ಒಡಿ ಮಾರ್ಗದರ್ಶನದಲ್ಲಿ ಇಂಪ್ರೋವೆಡ್ ಡಿಸೈನ್ ಆಫ್ ಜಿನ್ಛ್ರೊನೊಕ್ಸ್ ಎಡಿಸಿ ವಿದ್ ರೆಡ್ಯೂಸ್ಡ್ ಕಂಪೆರೇಟೊರ್ ಕೌಂಟ್ಸ್ ಪ್ರಬಂಧ ಆಗಿದೆ.

ಈ ಸಂಶೋಧನಾ ಕಾರ್ಯವನ್ನು ಸಂಯೋಜಿತ ಸರ್ಕ್ಯೂಟ್ ಮೂಲ ಮಾದರಿಯ ತಯಾರಿಕೆಗೆ ಕಾರಣವಾದ ಪ್ರೊ.ಅಶೋಕ್ ಶ್ರೀವಾಸ್ತವ, ಯುಎಸ್‌ಎಯ ಲೂಸಿಯಾನಾ ಸ್ಟೇಟ್ ಯೂನಿವರ್ಸಿಟಿಯೊಂದಿಗೆ ಜಂಟಿಯಾಗಿ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News