ಅಸಂಘಟಿತ ಕಾರ್ಮಿಕ ರಿಕ್ಷಾ ಚಾಲಕರಿಗೆ ಸೌಲಭ್ಯಗಳಿಲ್ಲ: ಕೋಟ ಶ್ರೀನಿವಾಸ ಪೂಜಾರಿ

Update: 2018-09-16 11:49 GMT

ಉಡುಪಿ, ಸೆ.16: ರಾಜ್ಯದಲ್ಲಿ ನೊಂದಾಣಿ ಮಾಡಿಕೊಂಡಿರುವ ಸುಮಾರು 3.5 ಲಕ್ಷ ರಿಕ್ಷಾ ಚಾಲಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸುವ ನಿರ್ಧಾರ ಸರಕಾರ ಕೈಗೊಂಡಿದ್ದರೂ ಬಹುತೇಕ ಕಡೆಗಳಲ್ಲಿ ಅದು ಅನುಷ್ಠಾನಕ್ಕೆ ಬಂದಿಲ್ಲ ಎಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬನ್ನಂಜೆ ಶಿವಗಿರಿ ಸಭಾಭವನದಲ್ಲಿ ರವಿವಾರ ಉಡುಪಿ ನಗರಸಭೆ ವ್ಯಾಪ್ತಿಯ ಪರವಾನಿಗೆ ಹೊಂದಿರುವ ಆಟೋ ಚಾಲಕರು ಮತ್ತು ಮಾಲಕರ ಸಂಘ ಟನೆಯನ್ನು ಉದ್ಘಾಟಿಸಿ ಬಳಿಕ ಪದಗ್ರಹಣ ನೆರವೆೀರಿಸಿ ಅವರು ಮಾತನಾ ಡುತಿದ್ದರು.

ಜೀವವಿಮೆ, ಆರೋಗ್ಯ ವಿಮೆ ಸಹಿತ ಇತರ ಬೇಡಿಕೆಗಳ ಪರಿಹಾರಕ್ಕಾಗಿ ರಿಕ್ಷಾ ಚಾಲಕರನ್ನು ಅಸಂಘಟಿತ ವಲಯಕ್ಕೆ ಸೇರಿಸಿ, ಗುರುತಿನ ಚೀಟಿ ನೀಡ ಲಾಗಿತ್ತು. ಆದರೆ ಅದರ ಪ್ರಯೋಜನ ಚಾಲಕರಿಗೆ ಈವರೆಗೆ ದೊರೆತಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಕಾರ್ಮಿಕರ ಅಧಿಕಾರಿಗಳ ಜಂಟಿ ಸಭೆ ಕರೆದು ಮಾಹಿತಿ ಪಡೆದುಕೊಳ್ಳಬೇಕಾಗಿದೆ ಎಂದರು.

ಜನಸಾಮಾನ್ಯರೊಂದಿಗೆ ಬೇರೆಯುವ ರಿಕ್ಷಾ ಚಾಲಕರು ಶ್ರಮ ಜೀವಿಗಳು ಹಾಗೂ ಪ್ರಾಮಾಣಿಕರಾಗಿದ್ದಾರೆ. ಇವರು ಅಪಘಾತಗಳ ಸಂದರ್ಭದಲ್ಲಿ ಆಪಾ ತ್ಬಂಧವರಾಗಿ ಕೆಲಸ ನಿರ್ವಹಿಸುತ್ತಾರೆ. ಆದರೆ ಅವರ ಕುಟುಂಬದ ನಿರ್ವಹಣೆ ಗಾಗಿ ಬಹಳ ಕಷ್ಟಪಡುತ್ತಿದ್ದಾರೆ. ಇವರಿಗೆ ಕಾನೂನಿನ ಹೆಸರಿನಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ ತೊಂದರೆ ನೀಡಬಾರದು ಎಂದು ಅವರು ತಿಳಿಸಿದರು.

ಆಟೋ ಚಾಲಕರ ಮತ್ತು ಮಾಲಕರ ಸಂಘಟನೆಯ ಗೌರವಾಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ, ಅಧ್ಯಕ್ಷ ರಾಜೇಶ್ ಬಿ.ಶೆಟ್ಟಿ, ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಕಾನೂನು ಸಲಹೆಗಾರ ಉಮೇಶ್ ಶೆಟ್ಟಿ ಕಳತ್ತೂರು, ಗೌರವ ಸಲಹೆಗಾರರಾದ ಮೋಹನ್ ರಾವ್ ದೇಶಪಾಂಡೆ, ಮಾದವ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷ ಹಾಗೂ ಕರಾಟೆ ಪಟು ವಾಮನ ಪಾಲನ್ ಅವರನ್ನು ಸನ್ಮಾನಿಸಲಾಯಿತು. ಗೌರವ ಸಲಹೆಗಾರ ಶಿವ ಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News