ಕಲಾವಿದ ಕೋಡಿ ವಿಶ್ವನಾಥ ಗಾಣಿಗರ ಅಂಚೆ ಚೀಟಿ ಬಿಡುಗಡೆ

Update: 2018-09-16 11:56 GMT

ಕುಂದಾಪುರ, ಸೆ.16: ಹಾರಾಡಿ ಕುಷ್ಟ ಗಾಣಿಗ ಜನ್ಮ ಶತಾಬ್ದಿ ಆಚರಣಾ ಸಮಿತಿ, ಮಟಪಾಡಿ ಬಚ್ಚ ಗಾಣಿಗ ಟ್ರಸ್ಟ್ ಆಶ್ರಯದಲ್ಲಿ ಹಾರಾಡಿ ಕುಷ್ಟ ಗಾಣಿಗ ಜನ್ಮ ಶತಾಬ್ದಿ ಕಾರ್ಯ ಕ್ರಮದ ಸಮಾರೋಪ ಹಾಗೂ ಹಾರಾಡಿ ಕುಷ್ಟ ಗಾಣಿಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶನಿವಾರ ವಡೇರಹೋಬಳಿ ವ್ಯಾಸರಾಜ ಮಠದ ವ್ಯಾಸರಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.

ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ ಗಾಣಿಗರ ಕರ್ಣನ ವೇಷಧಾರಿ ಚಿತ್ರವುಳ್ಳ ಅಂಚೆ ಚೀಟಿಯನ್ನು ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ ಬಿಡುಗಡೆಗೊಳಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷ ಗಾನ ಕಲಾವಿದ ವಂಡ್ಸೆ ನಾರಾಯಣ ಗಾಣಿಗ ಅವರಿಗೆ ಹಾರಾಡಿ ಕುಷ್ಟ ಗಾಣಿಗ ಪ್ರಶಸ್ತಿ ಪ್ರದಾನ ಮಾಡಾಯಿತು.

ವ್ಯಾಸರಾಜ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಗಾಣಿಗ, ತಾಲೂಕು ಗಾಣಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಭಾಸ್ಕರ, ಕೋಶಾಧಿಕಾರಿ ಪರಮೇಶ್ವರ ಜಿ.ಬಿ., ನಿವೃತ್ತ ಮುಖ್ಯ ಶಿಕ್ಷಕ ಪುಂಡಲೀಕ ಗಾಣಿಗ, ಇಂಜಿನಿಯರ್ ರಮಾ ನಂದ ಗಾಣಿಗ, ಯಕ್ಷಗಾನ ಸಂಯೋಜಕರಾದ ರವಿ ಗಾಣಿಗ ಆಜ್ರಿ, ರವಿ ಗಾಣಿಗ ಮಲ್ಲಾರಿ ಉಪಸ್ಥಿತರಿದ್ದರು.

ಹಿರಿಯ ನಟ ಶ್ರೀನಿವಾಸ ಉದ್ಯಾವರ ಅವರನ್ನು ಸಮ್ಮಾನಿಸಲಾಯಿತು. ಕೋಡಿ ವಿಶ್ವನಾಥ ಗಾಣಿಗರನ್ನು ಗೌರವಿಸಲಾಯಿತು. ಮಟಪಾಡಿ ಬಚ್ಚ ಗಾಣಿಗ ಟ್ರಸ್ಟ್‌ನ ಶ್ರೀನಿವಾಸ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಲ್ಲೆಯ ಗಾಣಿಗ ಸಮಾಜದ ಅಗ್ರಮಾನ್ಯ ಯಕ್ಷಗಾನ ಕಲಾವಿದರ ಕೂಡುವಿಕೆಯ ತಾಮ್ರಧ್ವಜ ಕಾಳಗ ಮತ್ತು ಚಿತ್ರಾಕ್ಷಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News