ಮಂಗಳೂರು: ಲಯನ್ಸ್ ಕ್ಲಬ್ ವತಿಯಿಂದ ಈದ್ ಮಿಲನ್ ಕಾರ್ಯಕ್ರಮ

Update: 2018-09-16 15:03 GMT

ಮಂಗಳೂರು, ಸೆ.16: ಹಲವು ಬಗೆಯ ಹೂವುಗಳಿರುವ ತೋಟ ನೋಡಲು ಸುಂದರವಾಗಿರುವಂತೆ ಸಮಾಜದಲ್ಲಿ ವಿಭಿನ್ನ ಧರ್ಮಗಳಿವೆ. ಎಲ್ಲರೂ ಪರಸ್ಪರ ಅರ್ಥಮಾಡಿಕೊಂಡು ಸೋದರರಂತೆ ಜೀವಿಸಿದಾಗ ಸುಂದರ, ಬಲಿಷ್ಟ ದೇಶ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಜಿಲ್ಲಾ ಲಯನ್ಸ್ ಕ್ಲಬ್ 317ಡಿ ಇದರ ವತಿಯಿಂದ ಶನಿವಾರ ನಗರದ ಸಂತ ಸೆಬಾಸ್ತಿಯನ್ ಸಭಾಂಗಣದಲ್ಲಿ ನಡೆದ ಈದ್ ಮಿಲನ್ ಪ್ರಯುಕ್ತ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಫೌಝಿಯಾ ಮತ್ತು ಸಮೀರಾ ಹಾಗೂ ಕೃಷಿ ಕ್ಷೇತ್ರದ ಸಾಧನೆಗಾಗಿ ಇಸ್ಮಾಯಿಲ್ ಮದ್ಯನಡ್ಕ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಈದ್ ಸಂದೇಶ ನೀಡಿದರು. ಲಯನ್ಸ್ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ, ನಿಟ್ಟೆ ವಿವಿ ಸಹಕುಲಾಧಿಪತಿ ಡಾ.ಎಂ.ಶಾಂತರಾಮ್ ಶೆಟ್ಟಿ, ಲಯನ್ಸ್ ಜಿಲ್ಲಾ ಪ್ರಥಮ ಉಪಗವರ್ನರ್ ರೊನಾಲ್ಡ್ ಗೋಮ್ಸ್, ದ್ವಿತೀಯ ಉಪಗವರ್ನರ್ ಡಾ.ಗೀತಪ್ರಕಾಶ್ ಎ., ಕಾರ್ಯಕ್ರಮಗಳ ಸಹಸಂಯೋಜಕಿ ಭಾರತಿ ಬಿ.ಎಂ., ಲಯನ್ ಮಹಿಳಾ ರಾಯಭಾರಿ ಇಂದಿರಾ ಎ.ಶೆಟ್ಟಿ, ಲಿಯೋ ಅಧ್ಯಕ್ಷೆ ಜಿ.ಪಲ್ಲವಿ ಪೈ, ಅಶ್ರಫ್ ಕರ್ನಿರೆ ಬಳ್ಕುಂಜ, ಟಿ.ಖಾಲಿದ್ ಮಂಗಳೂರು, ರಾಹತ್ ಉನ್ನಿಸಾ, ಲುಬ್ನಾ ಶೇಖ್, ಮಜೀದ್ ಎಂ., ಮೊಯಿದ್ದೀನ್ ಸುರತ್ಕಲ್ ಉಪಸ್ಥಿತರಿದ್ದರು.

ಈದ್ ಮಿಲನ್ ಸಂಯೋಜಕ ಕೆ.ಎಸ್.ಸಯೀದ್ ಸ್ವಾಗತಿಸಿದರು. ಸಹಸಂಯೋಜಕ ಮುಹಮ್ಮದ್ ಇಕ್ಬಾಲ್ ಅತಿಥಿಗಳನ್ನು ಪರಿಚಯಿಸಿದರು. ಅಬೂಬಕ್ಕರ್ ಕುಕ್ಕಾಡಿ ವಂದಿಸಿದರು. ಮುಹಮ್ಮದ್ ಅಮಿ ಕೆಮ್ಮಾಡಿ ಹಾಗೂ ಮೈಮೂನ ಮೊಯಿದ್ದೀನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News