ಬಂಗಾಳಿ ಚಿತ್ರವನ್ನು ಪಾಕ್ ಚಿತ್ರವೊಂದರ ರಿಮೇಕ್ ಎಂದ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು !

Update: 2018-09-16 16:25 GMT

ಕೋಲ್ಕತ್ತಾ, ಸೆ. 16: ಬೆಂಗಾಳಿ ನಟಿ ಹಾಗೂ ಟಿಎಂಸಿ ಸಂಸದ ದೀಪಕ್ ಅಧಿಕಾರಿ ತಾರಾಗಣದ ಚಲನಚಿತ್ರ ಪಾಕಿಸ್ತಾನಿ ಚಲನಚಿತ್ರ ರಿಮೇಕ್ ಎಂದು ಟ್ವೀಟ್ ಮಾಡಿದ ಬೆಂಗಾಳಿ ದಿನಪತ್ರಿಕೆ ‘ಸಂಗ್ಬಾದ್ ಪ್ರತಿದಿನ್’ನ ಮನೋರಂಜನೆ ವಿಭಾಗದ ಪತ್ರಕರ್ತ ಇಂದ್ರಾನಿ ರಾಯ್ ಅವರ ವಿರುದ್ಧ ಕೋಲ್ಕತ್ತಾ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

ಕೋಲ್ಕತ್ತಾ ಪೊಲೀಸ್‌ನ ಸೈಬರ್ ಸೆಲ್ ವಿಭಾಗದ ವಿಚಾರಣೆ ಸಂದರ್ಭ ‘ಹೋಯ್‌ ಚೋಯ್ ಅನ್‌ಲಿಮಿಟೆಡ್’ ಚಲನಚಿತ್ರ ನಿರ್ಮಿಸಿದ ಅಧಿಕಾರಿ ಅವರ ನಿರ್ಮಾಣ ಸಂಸ್ಥೆ ದೇವ್ ಎಂಟರ್‌ಟೈನ್‌ಮೆಂಟ್ ವೆಂಚರ್ಸ್‌ ಪ್ರಥಮ ಮಾಹಿತಿ ವರದಿ ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದರು ಎಂದು ಫೇಸ್‌ಬುಕ್‌ನ ಶನಿವಾರದ ಪೋಸ್ಟ್‌ನಲ್ಲಿ ರಾಯ್ ಬರೆದುಕೊಂಡಿದ್ದಾರೆ. ಆದರೆ, ದೇವ್ ಎಂಟರ್‌ಟೈನ್‌ಮೆಂಟ್ ವೆಂಚರ್ ಪ್ರಕರಣ ದಾಖಲಿಸಿರುವುದನ್ನು ನಿರಾಕರಿಸಿದೆ.

ಅಂಕಿತ್ ಚಟ್ಟೋಪಾದ್ಯಾಯ ನಿರ್ದೇಶನದ ‘ಹೋಯ್‌ಚೋಯ್ ಅನ್‌ಲಿಮಿಟೆಡ್’ ಟೀಸರ್ ಆಗಸ್ಟ್‌ನಲ್ಲಿ ಬಿಡುಗಡೆಯಾಗಿತ್ತು. ‘ಜವಾನಿ ಫಿರ್ ನಹಿ ಅನಿ’ ಪಾಕಿಸ್ತಾನಿ ಚಲನಚಿತ್ರವನ್ನು ನದೀಮ್ ಬೇಗ್ ನಿರ್ದೇಶಿಸಿದ್ದರು. ಇದು ಪಾಕಿಸ್ಥಾನದಲ್ಲಿ ಅತಿ ಹೆಚ್ಚು ಗಳಿಸಿದ ಮೂರನೆ ಚಿತ್ರವಾಗಿತ್ತು. ಪಾಕಿಸ್ತಾನಿ ಚಲನಚಿತ್ರ ‘ಜವಾನಿ ಫಿರ್ ನಹಿ ಅನಿ’ ಅನ್ನು ‘ಹೋಯ್‌ಚೋಯ್ ಅನ್‌ಲಿಮಿಟೆಡ್’ ಹೆಸರಿನಲ್ಲಿ ರಿಮೇಕ್ ಮಾಡಲಾಗಿದೆ ಎಂದು ಉಲ್ಲೇಖಿಸಿ ರಾಯ್ ಸೆಪ್ಟಂಬರ್ 13ರಂದು ವಿಕಿಪೀಡಿಯಾದ ಪುಟವೊಂದರ ಸ್ಕ್ರೀನ್‌ಶಾಟ್ ಅನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News