ಮಾದಕ ವ್ಯಸನ ಜಾಗೃತಿಗಾಗಿ ವ್ಯಂಗ್ಯಚಿತ್ರ- ಮರಳು ಶಿಲ್ಪರಚನೆ
Update: 2018-09-16 22:05 IST
ಮಲ್ಪೆ, ಸೆ.16: ಉಡುಪಿ ಜಿಲ್ಲಾ ಪೊಲೀಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್‌ಕ್ಲಬ್ ಸಹಯೋಗದಲ್ಲಿ ಮಾದಕ ವ್ಯಸನ ಮಾಸಚಾರಣೆ ಅಂಗವಾಗಿ ವ್ಯಂಗ್ಯಚಿತ್ರ ಪ್ರದರ್ಶನ ಮತ್ತು ಮರಳು ಶಿಲ್ಪರಚನೆ ಕಾರ್ಯಕ್ರಮ ರವಿವಾರ ಮಲ್ಪೆಕಡಲ ಕಿನಾರೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಚಿತ್ರ ಬರೆಯವ ಮೂಲಕ ಹಿರಿಯ ವ್ಯಂಗ್ಯಚಿತ್ರಕಾರ ಜೇಮ್ಸ್ವಾಜ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕಾಂತೆ ಗೌಡ ಮಾತನಾಡಿದರು. ಅಧ್ಯಕ್ಷತೆ ಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ವಹಿಸಿದ್ದರು.
ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಭೂಬಾಲನ್, ಮಲ್ಪೆ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ, ಮೈಕಲ್ ರೋಡ್ರಿಗಸ್, ಜನಾರ್ದನ ಕೊಡವೂರು ಉಪಸ್ಥಿತರಿದ್ದರು. ಜೇಮ್ಸ್ವಾಜ್, ಜೀವನ್ ಶೆಟ್ಟಿ, ತ್ರಿವರ್ಣ ವಿ.ಎಂ. ಕಾರ್ಟೂನುಗಳನ್ನು ಹಾಗೂ ಹರೀಶ್ ಸಾಗಾ, ಸುನಿಲ್ ಓಂತಿಬೆಟ್ಟು, ಜಗದೀಶ್ ಆಚಾರ್ಯ ಮರಳ ಶಿಲ್ಪಗಳನ್ನು ರಚಿಸಿದರು.