ಹಾಲು ಕುಡಿಯುತ್ತಿದ್ದ ಹಸುಗೂಸು ಮೃತ್ಯು

Update: 2018-09-16 16:42 GMT

ಶಿರ್ವ, ಸೆ.16: ಹಾಲು ಕುಡಿಯುತ್ತಿದ್ದ ವೇಳೆ ಮೂರು ತಿಂಗಳ ಹಸುಗೂಸು ಮೃತಪಟ್ಟ ಘಟನೆ ಪಾದೂರು ಗ್ರಾಮದ ಬಂಡಶಾಲೆ ಎಂಬಲ್ಲಿ ಸೆ.15ರಂದು ಬೆಳಗ್ಗೆ ನಡೆದಿದೆ.

ರಾಯಚೂರು ಜಿಲ್ಲೆಯ ಹನುಮಂತಮ್ಮ(28) ಎಂಬವರು ಪಾದೂರಿನ ಮನೆಯೊಂದರಲ್ಲಿ ಮನೆ ಕೆಲಸ ಮಾಡಿಕೊಂಡಿದ್ದು, ತನ್ನ 3 ತಿಂಗಳಿನ ಮಗು ಸಾನ್ವಿಗೆ ಹಾಲು ನೀಡುತ್ತಿರುವಾಗ ಮನೆ ಒಡತಿ ಊಟ ಕೋಡುವಂತೆ ಕರೆದಿದ್ದರು. ಕೂಡಲೇ ಹನುಮಂತಮ್ಮ ಮಗವನ್ನು ಅಲ್ಲಿಯೇ ಬಿಟ್ಟು ಅಡುಗೆ ಮನೆಗೆ ಹೋದರು. ಈ ವೇಳೆ ಮಗು ಜೋರಾಗಿ ಕಿರುಚಿಸ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದೆ ತಲೆಯನ್ನು ಒಂದು ಕಡೆ ವಾಲಿಸಿತ್ತೆನ್ನಲಾಗಿದೆ. ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಗು ಎದೆ ಹಾಲನ್ನು ನೀಡುವಾಗ ಹಾಲು ತಲೆಗೆ ಏರಿ ಮೃತಪಟ್ಟಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News