ಫಿಲಿಪ್ಪೀನ್ಸ್: ಟೈಫೂನ್ ‘ಮಾಂಗ್‌ಖುಟ್’ಗೆ ಕನಿಷ್ಠ 28 ಬಲಿ

Update: 2018-09-16 16:54 GMT

  ಟ್ಯುಗೊರಾವೊ,ಸೆ.16: ಉತ್ತರಫಿಲಿಪ್ಪೀನ್ಸ್‌ನಲ್ಲಿ ಶನಿವಾರ ಅಪ್ಪಳಿಸಿದ ಟೈಫೂನ್ ಮಾಂಗ್‌ಖುಟ್‌ಚಂಡಮಾರುತಕ್ಕೆ ಕನಿಷ್ಠ 28 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಬಹುತೇಕ ಭೂಕುಸಿತಗಳಿಂದಾಗಿ ಹಾಗೂ ಮಳೆಯ ಆರ್ಭಟಕ್ಕೆ ಮನೆಗಳು ಬಿದ್ದು ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ.

 ಶನಿವಾರ ಟೈಫೂನ್ ಮಾಂಗ್‌ಕುಟ್‌ನ ಹಾವಳಿಗೆ ತತ್ತರಿಸಿದ ಪ್ರಾಂತಗಳಲ್ಲೊಂದಾದ ನುವೆವಾ ವಿಝ್‌ಕಾಯಾದಲ್ಲಿ ಭೂಕುಸಿತದಿಂದಾಗಿ ನಾಲ್ವರು ಮೃತಪಟ್ಟಿದ್ದು ಓರ್ವ ಶಿಶು ಹಾಗೂ ಇನ್ನೋರ್ವ ಮಗು ಸೇರಿದ್ದಾರೆಂದು ಫಿಲಿಪ್ಪೀನ್ಸ್ ಅಧ್ಯಕ್ಷರ ಸಲಹೆಗಾರ ಫ್ರಾಂಕಿಸ್ ಟೊಲೆಂಟಿನೊ ತಿಳಿಸಿದ್ದಾರೆ.

ಟೈಫೂನ್ ಅಪ್ಪಳಿಸುವ ಅಪಾಯವಿರುವ ಪ್ರದೇಶಗಳಲ್ಲಿ ನೆಲೆಸಿರುವ 87 ಸಾವಿರಕ್ಕೂ ಅಧಿಕ ನಿವಾಸಿಗಳನ್ನು ತೆರವುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News