ಕಬಕ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಪರಿಸರ ಸ್ವಚ್ಚತಾ ಕಾರ್ಯಕ್ರಮ

Update: 2018-09-16 17:01 GMT

ಕಬಕ, ಸೆ. 16: ಕಬಕ  ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು ದುರ್ನಾತ ಬೀರುತಿದ್ದ ಪರಿಸರವನ್ನು ಇಂದು ಶುಚಿಗೊಳಿಸಿದರು.

ಕಬಕ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಅರ್ಷದ್.ಕೆ.ಎಸ್, ಕಾರ್ಯದರ್ಶಿ ಸಿದ್ದೀಕ್, ವಿಖಾಯ ಕನ್ವೀನರ್ ಆಸಿಫ್.ಕೆ.ಎಸ್, ಸರ್ಗಲಾಯ ಚೆಯರ್ಮೆನ್ ಅನ್ಸಾಫ್, ಶಾಕೀರ್ ಮುಸ್ಲಿಯಾರ್ , ಇರ್ಫಾನ್ ಕಬಕ ಹಾಗೂ ತುಫೈಲ್ ಕಬಕ ಈ ತಂಡದಲ್ಲಿ ಭಾಗಿಯಾಗಿದ್ದರು.

ಸ್ವಚ್ಚತಾ ಕಾರ್ಯಕ್ರಮವನ್ನು ಯಹ್ಯಾ ತಂಗಲ್ ದುವಾಶಿರ್ವಚನದ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಬಾ ಕಬಕ, ಕಬಕ ಬೀಟ್ ಪೊಲೀಸ್ ಮಂಜುನಾಥ್, ಬಾತೀಷಾ ಅಳಕೆಮಜಲು, ಅಶ್ರಫ್ ವಿಟ್ಲ, ಇಬ್ರಾಹಿಂ ಮುಸ್ಲಿಯಾರ್, ಮಜೀದ್ ಕೊಡಿಪ್ಪಾಡಿ, ಮುನೀರ್ ಕಬಕ, ಮೂಸಾ ಕುಂಞಿ ಹಾಗೂ ಉಮ್ಮರ್ ಫಾರೂಕ್ ಉಪಸ್ಥಿತರಿದ್ದರು.

ಎಸ್ಕೆಎಸ್ಸೆಸ್ಸೆಫ್ ಸ್ವಚ್ಚತಾ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಕಬಕ ಬೀಟ್ ಪೊಲೀಸ್ ಮಂಜುನಾಥ ಅವರು, ಕೆಲ ತಿಂಗಳಿಂದ ಇಡೀ ಕಬಕ ನಗರಕ್ಕೆ ಮಾರಕವಾಗಿದ್ದ ಕಸದ ರಾಶಿಯನ್ನು ಸ್ಷಚ್ಚಗೊಳಿಸಿ ಕಬಕ ಗ್ರಾಮಕ್ಕೆ ಎಸ್.ಕೆ.ಎಸ್.ಎಸ್.ಎಫ್. ಕಬಕ ವಲಯ ಮಾದರಿಯಾಗಿದೆ. ಬೆಳಗ್ಗಿನಿಂದ ಸುಮಾರು 30 ಯುವಕರ ತಂಡ ಶ್ರಮಪಡುತ್ತಿರುವುದನ್ನ ನಾನು ಗಮನಿಸಿದ್ದು. ಅವರೆಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆ ಯನ್ನ ಸಲ್ಲಿಸುತ್ತಿದ್ದೇನೆ. ನಿಮ್ಮ ಈ ಕೆಲಸ ನಿಮ್ಮ ಗ್ರಾಮಕ್ಕೆ ಗೌರವ ತಂದುಕೊಡುವಂತದ್ದು ಮತ್ತು ಪರ ಊರಿನವರಿಗೂ ಮಾದರಿಯಾಗಿ ನಾವೆಲ್ಲರೂ ಹೆಮ್ಮೆಪಡುವಂತಾಗಿದೆ. ನಿಮ್ಮ ಎಲ್ಲಾ ಸಮಾಜಮುಖಿ ಕೆಲಸಗಳಲ್ಲಿ ನಿಮ್ಮೊಂದಿಗೆ ಪೊಲೀಸ್ ಇಲಾಖೆ ಸಹಕಾರ ಸದಾ ಇರುತ್ತದೆ ಎಂದು ಭರವಸೆಯನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News