ಅನುಭವದಿಂದ ದೊರೆತ ಜ್ಞಾನ ಆತ್ಮ ವಿಶ್ವಾಸಕ್ಕೆ ಪೂರಕ: ಡಾ. ಗುರುರಾಜ ಕರ್ಜಗಿ

Update: 2018-09-16 17:04 GMT

ಮಂಗಳೂರು, ಸೆ.16: ಅನುಭವದಿಂದ ದೊರೆಯುವ ಜ್ಞಾನ ಬದುಕಿನ ಬಗ್ಗೆ ನಮ್ಮಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸುತ್ತದೆ ಎಂದು ಖ್ಯಾತ ಚಿಂತಕ ಡಾ. ಗುರುರಾಜ ಕರ್ಜಗಿ ತಿಳಿಸಿದ್ದಾರೆ.

ನಗರದ ಕೊಡಿಯಾಲ ಬೈಲ್‌ನಲ್ಲಿರುವ ಕರ್ಣಾಟಕ ಬ್ಯಾಂಕ್ ಸಭಾಂಗಣದಲ್ಲಿಂದು ಡಿ.ವಿ.ಜಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡ ‘ಬಾಳಿಗೊಂದು ನಂಬಿಕೆ ’ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಿದ್ದರು. ಮನುಷ್ಯನ ಬದುಕಿನಲ್ಲಿ ನಂಬಿಕೆ ಮುಖ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆ ಇರಬೇಕಾಗಿದೆ. ಜೊತಗೆ ನಾವು ಮಾಡುವ ಕೆಲಸದ ಬಗ್ಗೆ ಇರುವ ಶ್ರದ್ದೆಮತ್ತು ಆಕೆಲಸದಿಂದ ಇತರರಿಗೆ ಒಳಿತಾಗುತ್ತದೆ ಎನ್ನುವ ಬಲವಾದ ನಂಬಿಕೆ ನಮ್ಮನ್ನು ಉನ್ನತ ಗುರಿ ಯನ್ನು ತಲುಪಲು ಸಹಾಯಮಾಡುತ್ತದೆ. ಡಿ.ವಿ.ಜಿಯವರು ಅಂದಂತೆಘನ ತತ್ವವೊಂದಕ್ಕೆ ದಿನರಾತ್ರಿ ಮನಸಸೋತು...ನೆನಯದೆ ಇನ್ನೊಂದು ಅದರ ಅನು ಸಂಧಿಯಲ್ಲಿ ಜೀವ ಭಾರವ ಮರೆಯುವುದು...ಎನ್ನುವುದನ್ನು ನೆನಪಿಸಿಕೊಂಡು ಬದುಕಿಗೆ ಉನ್ನತವಾದ ಗುರಿಯೊಂದನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಅತ್ಯಂತ ಶ್ರದ್ಧೆಯಿಂದ ಶ್ರಮಪಡಬೇಕಾಗಿದೆ. ಜಗತ್ತಿನಲ್ಲಿ ಈ ರೀತಿಯ ಚಿಂತನೆಯೊಂದಿಗೆ ಸಾಧನೆ ಮಾಡಿದ ಹಲವಾರು ಸಾಧಕರು ನಮ್ಮ ಮುಂದಿದ್ದಾರೆ. ರಿಕೇಟ್ಸ್ ರೋಗದಿಂದ ಬಳಲುತ್ತಿದ್ದ ಓಝೆ ಸಿಂಮ್ಸನ್ ತಾನು ಶ್ರೇಷ್ಠ ಫುಟ್‌ಬಾಲ್ ಆಟಗಾರನಾಗಬೇಕು ಎಂಬ ಚಿಂತನೆಯೊಂದಿಗೆ ಪ್ರಯತ್ನ ಪಟ್ಟು ಆ ಸಾಧನೆಯನ್ನು ಮಾಡುತ್ತಾನೆ ಎಂದು ಕರ್ಜಗಿ ತಿಳಿಸಿದರು.

ಬದುಕಿನಲ್ಲಿ ನಾವು ಪಡೆಯುವ ವಿವಿಧ ರೀತಿಯ ನಂಬಿಕೆಗಳು ನಮ್ಮ ನಂಬಿಕೆಗಳನ್ನು ಗಟ್ಟಿಗೊಳಿಸುತ್ತವೆ. ಈ ರೀತಿಯಾದ ನಮ್ಮ ನಂಬಿಕೆಗಳು, ಭಗವಂತನ ಮೇಲಿನ ನಂಬಿಕೆಗಳು , ನಮ್ಮ ಕೆಲಸದಲ್ಲಿ ನಮಗಿರಿವ ಶ್ರದ್ಧೆ ನಮ್ಮ ಜೀವನದ ಭರವಸೆಯ ಬೆಳಕಾಗಿದೆ. ಬದುಕಿನ ಲ್ಲಿ ಸಕಾರಾತ್ಮಕವಾದ ಚಿಂತನೆಯನ್ನು ಬೆಳೆಸಿಕೊಳ್ಳಲು ಸಹಾಯಮಾಡುತ್ತದೆ. ನಮ್ಮ ಬಗ್ಗೆ ನಮಗಿರುವ ಗಟ್ಟಿಯಾದ ನಂಬಿಕೆ ನಮ್ಮನ್ನು ಆನಂದದಾಯಕವಾದ ಬದುಕಿನತ್ತ ಕೊಂಡೊಯುತ್ತದೆ ಎಂದು ಡಾ.ಗುರುರಾಜ ಕರ್ಜಗಿ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News