ಕೆಸಿರೋಡ್ ಪೊಲಿಕ್ಲಿನಿಕ್-ಡಯಗ್ನೋಸ್ಟಿಕ್ ಸೆಂಟರ್ ಶುಭಾರಂಭ

Update: 2018-09-16 17:06 GMT

ಮಂಗಳೂರು, ಸೆ.16: ತಲಪಾಡಿಯ ಕೆಸಿ ರೋಡ್ ಸುಲ್ತಾನ್ ಪ್ಲಾಝಾದಲ್ಲಿ ರವಿವಾರ ಕೆಸಿ ರೋಡ್ ಪೊಲಿಕ್ಲಿನಿಕ್ ಮತ್ತು ಡಯಗ್ನೋಸ್ಟಿಕ್ ಸೆಂಟರ್ ಶುಭಾರಂಭಗೊಂಡಿತು.

ಕೆಸಿ ರೋಡ್ ಪೊಲಿಕ್ಲಿನಿಕ್ ಮತ್ತು ಡಯಗ್ನೋಸ್ಟಿಕ್ ಸೆಂಟರ್‌ನ್ನು ತಲಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಆಳ್ವ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತಲಪಾಡಿ ಗ್ರಾಪಂ ಪಿಡಿಒ ಕೇಶವ ಪೂಜಾರಿ, ಕೆ.ಸಿರೋಡ್ ಜುಮ್ಮಾ ಮಸ್ಜಿದ್‌ನ ಖತೀಬ್ ಹುಸೈನ್ ಸಅದಿ, ಫಹಾದ್ ಫಿಶ್ ಮಿಲ್‌ನ ಎಂಡಿ ಅಬ್ದುಲ್ ರಝಾಕ್, ಸುಲ್ತಾನ್ ಪ್ಲಾಝಾದ ಸೂಪಿ ಹಾಜಿ, ತಲಪಾಡಿ ಅಬ್ರಾರ್ ಮಸ್ಜಿದ್‌ನ ಅಬ್ಬಾಸ್, ಸೀದಿಯಬ್ಬ ಹಾಜಿ, ಚೊಕ್ಕಬೆಟ್ಟುವಿನ ಎಚ್‌ಕೆ ಮೆಡಿಕಲ್ ಸೆಂಟರ್‌ನ ಎಂ.ಜಾಫರ್ ಸಾದೀಕ್, ಮಾಜಿ ಗ್ರಾಪಂ ಅಧ್ಯಕ್ಷ ಖಾದರ್ ತಲಪಾಡಿ, ಸೈಯದ್ ಎಂ., ಕೆ.ಕೆ. ಕಾಸಿಮ್ ಮುಸ್ಲಿಯಾರ್, ಎ.ಕೆ.ಮುಹಮ್ಮದ್ ಸಲಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News