ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರವೇಶಕ್ಕೆ ಸೆ. 20 ಅಂತಿಮ ದಿನ

Update: 2018-09-17 14:13 GMT

ಉಡುಪಿ, ಸೆ.17: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ಕೋರ್ಸ್‌ಗಳಾದ ಬಿ.ಎ/ಬಿ.ಕಾಂ, ಎಂ.ಎ/ಎಂ.ಕಾಂ, ಬಿ.ಲಿಬ್.ಐಸ್ಸಿ,/ಎಂ.ಲಿಬ್.ಐಸ್ಸಿ ಮತ್ತು ಎಂ.ಎಸ್ಸಿ (ಪರಿಸರ ವಿಜ್ಞಾನ) ವಿಷಯಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಪ್ರವೇಶಕ್ಕೆ ಸೆ.20 ಕೊನೆಯ ದಿನವಾಗಿರುತ್ತದೆ. ಅ.1ರವರೆಗೆ ದಂಡ ಶುಲ್ಕ 200 ರೂ. ಪಾವತಿಸಿ ಪ್ರವೇಶ ಪಡೆಯಬಹುದು.

ಅರ್ಜಿಗಳನ್ನು ಕರಾಮುವಿ ಪ್ರಾದೇಶಿಕ ಕೇಂದ್ರ ಕಚೇರಿ, ಹಳೇ ಜಿಪಂ ಕಟ್ಟಡ, ಬನ್ನಂಜೆ, ಉಡುಪಿ ಇಲ್ಲಿಂದ ಪಡೆದುಕೊಂಡು, ಸೆ.20ರೊಳಗೆ ಉಡುಪಿ ಪ್ರಾದೇಶಿಕ ಕೇಂದ್ರ ಕಚೇರಿಗೆ ಸಲ್ಲಿಸಿ, ಸಿದ್ಧಪಾಠಗಳನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ.

 ಹೆಚ್ಚಿನ ವಿವರಗಳಿಗೆ ವಿವಿ ನಿಲಯದ ವೆಬ್‌ಸೈಟ್ www.ksoumysore. karnataka.gov.in- ಅಥವಾ ಉಡುಪಿ ಪ್ರಾದೇಶಿಕ ಕೇಂದ್ರದ ದೂರವಾಣಿ ಸಂಖ್ಯೆ: 0820-2522247,9972526647 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯುವಂತೆ ಉಡುಪಿಯ ಪ್ರಾದೇಶಿಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News