ರೋವರ್ಸ್‌- ರೇಂಜರ್ಸ್‌ ಘಟಕದ ಅಭಿವಿನ್ಯಾಸ ಕಾರ್ಯಕ್ರಮ

Update: 2018-09-17 14:14 GMT

ಉಡುಪಿ, ಸೆ.17: ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್‌-ರೇಂಜರ್ಸ್‌ ಘಟಕದ 2018-19ನೇ ಸಾಲಿನ ಅಭಿವಿನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ರೋವರ್ ಸಂಚಾಲಕ ನಿತಿನ್ ಅಮಿನ್ ಹಾಗೂ ವಿತೇಶ್ ಕಾಂಚನ್ ಉಪಸ್ಥಿತರಿದ್ದರು. ಸರಕಾರಿ ಪದವಿ ಪೂರ್ವ ಕಾಲೇಜಿನ ರೇಂಜರ್ ಲೀಡರ್ ಸುಜಾತ ಟಿ. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಲೇಜಿನ ರೋವರ್ ಲೀಡರ್ ಅನಿಲ್‌ಕುಮಾರ್ ಕೆ.ಎಸ್., ರೇಂಜರ್ ಲೀಡರ್ ಸವಿತಾ, ರೋವರ್ ವಿದ್ಯಾರ್ಥಿ ನಾಯಕ ಪಿ.ಎಸ್.ಕಾರ್ತಿಕ್, ರೇಂಜರ್ ವಿದ್ಯಾರ್ಥಿ ನಾಯಕಿ ಅಶ್ವಿತಾ ಉಪಸ್ಥಿತರಿದ್ದರು.

ರೇಂಜರ್ ವಿದ್ಯಾರ್ಥಿನಿ ಸಂಗೀತಾ ಸ್ವಾಗತಿಸಿ, ರೋವರ್ ಲೀಡರ್ ಅನಿಲ್ ಕುಮಾರ್‌ಕೆ.ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೇಂಜರ್ ವಿದ್ಯಾರ್ಥಿನಿ ಶ್ರೀರಕ್ಷಾ ವಂದಿಸಿದರು. ರೇಂಜರ್ ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News