ಹರೇಕಳ: ದೆಬ್ಬೇಲಿ ಅಂಗನವಾಡಿ ಕೇಂದ್ರ ಉದ್ಘಾಟನೆ

Update: 2018-09-17 15:04 GMT

ಕೊಣಾಜೆ, ಸೆ. 17: ಉದ್ಯೋಗ ಖಾತರಿ ಯೋಜನೆಯು ಸಮರ್ಪಪಕವಾಗಿ ಬಳಸಿದಾಗ ಆಗುವ ಪ್ರಯೋಜನಕ್ಕೆ ದೆಬ್ಬೇಲಿ ಅಂಗನವಾಡಿ ಸಾಕ್ಷಿಯಾಗಿದೆ. ಗ್ರಾಮೀಣ ಭಾಗದಲ್ಲೂ ಉತ್ತಮ ಕಟ್ಟಡ ನಿರ್ಮಾಣದಿಂದ  ಬಲಿಷ್ಠ, ಅಭಿವೃದ್ಧಿಯ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಹೇಳಿದರು. 

ಅವರು ಹರೇಕಳ ಗ್ರಾಮದ ದೆಬ್ಬೇಲಿಯಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ, ಮಾತನಾಡಿದರು. 

ಭಾಷೆ ಎಲ್ಲವೂ ಬೇಕು. ಕನ್ನಡ ಭಾಷೆಗಾಗಿ ಇತರ ಭಾಷೆಗಳನ್ನು ದೂರವಿಡುವುದು ಸಲ್ಲ. ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಅಂಗನವಾಡಿ ಮಕ್ಕಳಿಗೂ ಇತರ ಭಾಷೆ ಕಲಿಸಲು ಮುಂದಾಗಬೇಕು ಎಂದು ಹೇಳಿದರು. 

ಕಟ್ಟಡ ನಿರ್ಮಾಣಕ್ಕೆ ಸಹಕರಿಸಿ ಹಾರೀಸ್, ಬದ್ರುದ್ದೀನ್, ಕಲ್ಯಾಣಿ, ಪುಷ್ಪಾ, ಸಂಶುದ್ಧೀನ್ ಅವರನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೆಸಿಂತಾ ಡಿಸೋಜ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಮುಸಫಾ ಮಲಾರ್, ತಾಲೂಕು ಪಂ. ಕಾರ್ಯನಿರ್ವಹಣಾಧಿಕಾರಿ ಸದಾನಂದ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಗ್ರಾಮ ಪಂ. ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್, ಪಂ. ಸದಸ್ಯರಾದ ಬಶೀರ್, ಸತ್ತಾರ್, ಮಾಜಿ ಅಧ್ಯಕ್ಷ ದಾಮೋದರ ಗಟ್ಟಿ, ಕೊಣಾಜೆ ಗ್ರಾಮ ಪಂಚಾಯಿತಿ ಸದಸ್ಯ ನಝರ್, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ ಪೂಜಾರಿ, ಸುರೇಖ ಚಂದ್ರಹಾಸ, ಶಶಿಪ್ರಭಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಅಂಗನವಾಡಿ ಮೇಲ್ವೀಚಾರಕಿ ಶಂಕರಿ ಸ್ವಾಗತಿಸಿದರು. ಕಾರ್ಯಕರ್ತೆ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News