ಸಿದ್ಥಾರ್ಥ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಆರಂಭ

Update: 2018-09-17 15:08 GMT

ಭಟ್ಕಳ, ಸೆ. 17: ಶಿರಾಲಿಯ ಸಿದ್ಧಾರ್ಥ ಕಾಲೇಜಿನಲ್ಲಿ  ಪದವಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಉದ್ಘಾಟನೆಗೊಂಡಿತು. ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಂಕ್, ಇನ್ನೂರನ್ಸ, ಯುಪಿಎಸ್‍ಸಿ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮರ್ಪಕವಾದ ತರಬೇತಿ ನೀಡಲಾಗುತ್ತದೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ನಿರ್ದೇಶಕ ಸುಜ್ಞಾನ ಬೈಂದೂರ ನಮ್ಮ ಕಾಲೇಜಿನ ವಿದ್ಯಾರ್ಥಿಗಳ ವ್ಯಕ್ತಿತ್ವ ಹಾಗೂ ಸರ್ವಾಂಗೀಣ ಪ್ರಗತಿಗಾಗಿ ಈ ರೀತಿಯ ತರಬೇತಿಗಳನ್ನು ನೀಡಲಾಗುವುದು. ನಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ನಾವು ಬದ್ಧರಾಗಿದ್ದೇವೆ. ಮುಂದಿನ ವರ್ಷದಿಂದ ಹೊಸ ವಿಜ್ಞಾನದ ಕೋರ್ಸಗಳನ್ನು ಆರಂಭಿಸಲಾಗುವುದು ಎಂದರು.  ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ವಿದ್ಯಾರ್ಥಿಗಳನ್ನು ಎಲ್ಲ ರೀತಿಯಲ್ಲಿ ತರಬೇತಿ ನೀಡಿ ಆತ್ಮವಿಶ್ವಾಸ ಬೆಳೆಸುವುದು ಕಾಲೇಜಿನ ಧ್ಯೇಯವಾಗಿದೆ  ಎಂದರು. ಈ ತರಬೇತಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು  ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಇದು ಉತ್ತಮ ಬೆಳವಣೆಗೆ ಎಂದರು. 

ಈ ಸಂದರ್ಭ ಮಾತನಾಡಿದ ಮುಖ್ಯ ತರಬೇತುದಾರರಾದ ಸಿ-ಟೆಕ್‍ಗುರು. ಕೋಮ್  ಕುಮಟಾದ ಮಾರುತಿ ನಾಯ್ಕ “ನಮ್ಮ ತರಬೇತಿಗಳಿಗೆ ಒಳ್ಳೆಯ ಫಲಿತಾಂಶ ಬರಬೇಕಾದರೆ ವಿದ್ಯಾರ್ಥಿಗಳ ಸಹಕಾರ ಹಾಗು ಸ್ವಪ್ರಯತ್ನವೂ ಅತೀಮುಖ್ಯ” ಎಂದರು.

ವಿದ್ಯಾರ್ಥಿನಿಯರಾದ   ಅಶ್ವಿನಿ ಪೈ ಹಾಗೂ  ಲಾವಣ್ಯ ಮೊಗೇರ್ ಪ್ರಾರ್ಥಿಸಿದರು. ಅದ್ಯಾಪಕ ಶಿವಕುಮಾರ ಶೆಟ್ಟಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News