ಕಬಡ್ಡಿ ಪಂದ್ಯಾಟ: ಪೆರ್ನೆ ತಂಡ ಪ್ರಥಮ, ಬಿಸಿ ಟೈಗರ್ಸ್ ನೇರಳಕಟ್ಟೆ ದ್ವಿತೀಯ ಸ್ಥಾನ

Update: 2018-09-17 15:54 GMT

ವಿಟ್ಲ, ಸೆ. 17:  ಸಕ್ಸಸ್ ಹಾಗು ಶೈನಿಂಗ್ ಫ್ರೆಂಡ್ಸ್ ನೇರಳಕಟ್ಟೆ ಇದರ ಆಶ್ರಯದಲ್ಲಿ ಇಲ್ಲಿನ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 18 ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಅಯೋಧ್ಯಾ ನಗರ ಪೆರ್ನೆ ತಂಡವು ಪ್ರಥಮ ಸ್ಥಾನ ಹಾಗು ಬಿ.ಸಿ. ಟೈಗರ್ಸ್ ನೇರಳಕಟ್ಟೆ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಪೆರ್ನೆ ತಂಡದ ಝಾಹಿದ್ ಆಲ್ ರೌಂಡರ್, ಪ್ರವೀಣ ಉತ್ತಮ ಹಿಡಿತಗಾರ ಹಾಗೂ ನೇರಳಕಟ್ಟೆ ತಂಡದ ನೌಶಾದ್ ಉತ್ತಮ ದಾಳಿಗಾರ ಪ್ರಶಸ್ತಿಗಳನ್ನು ಪಡೆದುಕೊಂಡರು.

ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಪಂದ್ಯಾಟವನ್ನು ಉದ್ಘಾಟಿಸಿದರು. ನೇರಳಕಟ್ಟೆ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರೋಹಿತಾಶ್ವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಗಿರೀಶ್ ದಾಸಕೋಡಿ, ಸಮದ್ ಪರ್ಲೊಟ್ಟು, ಕಬಡ್ಡಿ ತೀರ್ಪುಗಾರ ಖಿಲ್ರ್ ಅಬ್ಬಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಕ್ಸಸ್ ಮತ್ತು ಶೈನಿಂಗ್ ಫ್ರೆಂಡ್ಸ್ ಪದಾಧಿಕಾರಿಗಳಾದ ಶಫೀಕ್, ಶಾಹಿರ್, ರಿಫಾತ್, ನಿಝಾಂ, ಸುಹೈಲ್, ಸುಹಾನ್, ಸಲೀಂ, ಶರೀಫ್, ಫಾಝಿಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News