‘ಫ್ಲಾರೆನ್ಸ್’ ಚಂಡಮಾರುತ ಪ್ರಭಾವ: ನೆರೆ ಪರಿಸ್ಥಿತಿ ಉಲ್ಬಣ; ಸಾವಿನ ಸಂಖ್ಯೆ 17ಕ್ಕೆ ಏರಿಕೆ

Update: 2018-09-17 16:23 GMT

ವಿಲ್ಮಿಂಗ್ಟನ್ (ನಾರ್ತ್ ಕರೋಲಿನ), ಸೆ. 17: ಚಂಡಮಾರುತ ‘ಫ್ಲಾರೆನ್ಸ್’ನ ಪ್ರಭಾವದಿಂದ ಅಮೆರಿಕದ ಉತ್ತರ ಮತ್ತು ದಕ್ಷಿಣ ಕರೋಲಿನ ರಾಜ್ಯಗಳಲ್ಲಿ ತಲೆದೋರಿರುವ ಪ್ರವಾಹ ರವಿವಾರದ ವೇಳೆಗೆ ಇನ್ನಷ್ಟು ಉಲ್ಬಣಿಸಿದೆ. ಅಗಾಧ ಪ್ರವಾಹದಿಂದಾಗಿ ನಾರ್ತ್ ಕರೋಲಿನ ರಾಜ್ಯದ ವಿಲ್ಮಿಂಗ್ಟನ್ ನಗರಕ್ಕೆ ಹೋಗುವ ರಸ್ತೆಗಳು ಜಲಾವೃತವಾಗಿವೆ ಹಾಗೂ ಉಭಯ ರಾಜ್ಯಗಳ ಕಿಲೋಮೀಟರ್‌ಗಟ್ಟಲೆ ಪ್ರದೇಶಗಳನ್ನು ಮಣ್ಣುಮಿಶ್ರಿತ ನೆರೆ ನೀರು ಆವರಿಸಿದೆ.

‘‘ಏರುತ್ತಿರುವ ಪ್ರವಾಹದ ಮಟ್ಟದೊಂದಿಗೇ ಜನಜೀವನದ ಅಪಾಯವೂ ಹೆಚ್ಚುತ್ತಿದೆ’’ ಎಂದು ನಾರ್ತ್ ಕರೋಲಿನ ಗವರ್ನರ್ ರಾಯ್ ಕೂಪರ್ ಹೇಳಿದ್ದಾರೆ. ಈ ನಡುವೆ, ‘ಫ್ಲಾರೆನ್ಸ್’ ಚಂಡಮಾರುತದಿಂದಾಗಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದೆ. ಚಂಡಮಾರುತವು ನಿರಂತರವಾಗಿ ಪಶ್ಚಿಮದತ್ತ ಮುಂದುವರಿಯುತ್ತಿದ್ದು, ಕಾಲಿಟ್ಟ ಪ್ರದೇಶಗಳಲ್ಲಿ 75 ಸೆಂಟಿಮೀಟರ್‌ಗಳಷ್ಟು ಅಗಾಧ ಮಳೆಯನ್ನು ಸುರಿಸುತ್ತಿದೆ. ಇದರೊಂದಿಗೆ, ಈ ಹಿಂದೆಂದೂ ಕಾಣದಂಥ ಪ್ರವಾಹ ತಲೆದೋರುವ ಭೀತಿ ಎದುರಾಗಿದೆ.

ಪ್ರವಾಹ ಏರುತ್ತಿರುವ ನದಿಗಳ ಸಮೀಪದಿಂದ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಆದೇಶ ನೀಡಲಾಗಿದೆ. ಕೇಪ್ ಫಿಯರ್ ಲಿಟಲ್ ರಿವರ್, ಲಂಬರ್, ವ್ಯಾಕಮವ್ ಮತ್ತು ಪೀ ಡೀ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುವ ಎಚ್ಚರಿಕೆಯನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News