2025ರ ವೇಳೆಗೆ 52 ಶೇ. ಕೆಲಸ ರೋಬೊಟ್‌ಗಳಿಂದ: ಅಧ್ಯಯನ

Update: 2018-09-17 16:24 GMT

ಪ್ಯಾರಿಸ್, ಸೆ. 17: ರೋಬೊಟ್‌ಗಳು 2025ರ ವೇಳೆಗೆ ಈಗಿನ ಕೆಲಸದ 52 ಶೇಕಡದಷ್ಟನ್ನು ಮಾಡುತ್ತವೆ ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲುಇಎಫ್)ಯ ಅಧ್ಯಯನವೊಂದು ಸೋಮವಾರ ಹೇಳಿದೆ.

ಇದು ರೋಬೊಟ್‌ಗಳು ಈಗ ಮಾಡುತ್ತಿರುವ ಕೆಲಸಕ್ಕೆ ಹೋಲಿಸಿದರೆ ದ್ವಿಗುಣವಾಗಿದೆ. ಹೆಚ್ಚಿನ ಕೆಲಸಗಳನ್ನು ರೋಬೊಟ್‌ಗಳು ಮಾಡುವ ಹಿನ್ನೆಲೆಯಲ್ಲಿ, ಮಾನವರು ಹೊಸ ಪಾತ್ರಗಳನ್ನು ಅರಸಬೇಕಾಗುತ್ತದೆ. ಯಂತ್ರಗಳು ಮತ್ತು ಕಂಪ್ಯೂಟರ್ ಪ್ರೋಗ್ರಾಮ್‌ಗಳೊಂದಿಗೆ ಮಾನವರು ಕೆಲಸ ಮಾಡುವ ವಿಧಾನದಲ್ಲಿ ಅಗಾಧ ಬದಲಾವಣೆಯಾಗುವುದರಿಂದ, ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳಲು ಮಾನವರು ಅವರ ನೈಪುಣ್ಯಗಳನ್ನು ಪರಿಷ್ಕರಿಸಿಕೊಳ್ಳಬೇಕಾಗುತ್ತದೆ.

‘‘2025ರ ವೇಳೆಗೆ, ಈಗಿನ 29 ಶೇಕಡಕ್ಕೆ ಹೋಲಿಸಿದರೆ, ಕೆಲಸದ ಸ್ಥಳಗಳಲ್ಲಿರುವ ಕೆಲಸಗಳ ಅರ್ಧಕ್ಕೂ ಹೆಚ್ಚಿನ ಭಾಗವನ್ನು ಯಂತ್ರಗಳು ಮಾಡುತ್ತವೆ’’ ಎಂದು ಸ್ವಿಟ್ಸರ್‌ಲ್ಯಾಂಡ್‌ನ ಲಾಭಉದ್ದೇಶರಹಿತ ಸಂಸ್ಥೆ ಡಬ್ಲುಇಎಫ್ ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News