ಅಮೆರಿಕನ್ನರು ಟ್ರಂಪ್‌ರನ್ನು ನಂಬುತ್ತಿಲ್ಲ: ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್

Update: 2018-09-17 16:37 GMT

ವಾಶಿಂಗ್ಟನ್ ಸೆ. 17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಧ್ಯಕ್ಷೀಯ ಪ್ರಚಾರ ತಂಡದಲ್ಲಿ ಏನು ನಡೆಯುತ್ತಿತ್ತು ಎಂಬ ವಿಷಯ ಅವರಿಗೆ ಗೊತ್ತಿರಲಿಲ್ಲ ಎನ್ನುವುದನ್ನು ಜನರು ನಂಬುತ್ತಿಲ್ಲ ಎಂದು ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ರವಿವಾರ ಹೇಳಿದ್ದಾರೆ.

2016ರ ಚುನಾವಣಾ ಪ್ರಚಾರ ಅವಧಿಯಲ್ಲಿ ನಾನು ರಶ್ಯದೊಂದಿಗೆ ಸಂಪರ್ಕದಲ್ಲಿದ್ದುದು ನಿಜ ಎಂಬುದನ್ನು ಟ್ರಂಪ್ ಪ್ರಚಾರ ತಂಡದ ಮಾಜಿ ಮುಖ್ಯಸ್ಥ ಪೌಲ್ ಮನಫೋಟ್ ಒಪ್ಪಿಕೊಂಡ ದಿನಗಳ ಬಳಿಕ ಪ್ರಮೀಳಾ ಈ ಹೇಳಿಕೆ ನೀಡಿದ್ದಾರೆ.

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿತ್ತು ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ವಕೀಲ ರಾಬರ್ಟ್ ಮುಲ್ಲರ್ ಜೊತೆ ಸಹಕರಿಸಲೂ ಮನಫೋರ್ಟ್ ಒಪ್ಪಿಕೊಂಡಿದ್ದಾರೆ.

ಪ್ರಮೀಳಾ ಜಯಪಾಲ್, ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾದ ಮೊದಲ ಭಾರತೀಯ-ಅಮೆರಿಕನ್ ಮಹಿಳೆಯಾಗಿದ್ದಾರೆ.

‘‘ಇಲ್ಲಿ ಯಾರೋ ನಗಣ್ಯ ವ್ಯಕ್ತಿಗಳು ತಪ್ಪೊಪ್ಪಿಕೊಂಡಿರುವುದಲ್ಲ. ಟ್ರಂಪ್‌ರ ಉನ್ನತ ಸಲಹಾಕಾರರು, ಪ್ರಚಾರ ತಂಡವನ್ನು ನಡೆಸಿದವರು, ತಂಡದ ಮ್ಯಾನೇಜರ್, ಉಪ ಮ್ಯಾನೇಜರ್, ಅಧ್ಯಕ್ಷರ ಖಾಸಗಿ ವಕೀಲರು ಸೇರಿದಂತೆ ಅತಿ ಮುಖ್ಯ ವ್ಯಕ್ತಿಗಳು ತಪ್ಪೊಪ್ಪಿಕೊಂಡಿರುವುದನ್ನು ನಾವು ನೋಡಿದ್ದೇವೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News