67 ವರ್ಷಗಳಿಂದ ಸರಪಳಿಯಲ್ಲಿ ಬಂಧಿಸಿರುವ ಆನೆಗಳನ್ನು ಬಿಡುಗಡೆ ಮಾಡಿ: ಶ್ರೀಲಂಕಾ ಅಧ್ಯಕ್ಷರಿಗೆ ಮೇನಕಾ ಗಾಂಧಿ ಪತ್ರ

Update: 2018-09-17 17:54 GMT

ಹೊಸದಿಲ್ಲಿ, ಸೆ. 17: ದೆಹಿವಾಲಾ ಮೃಗಾಲಯ ಹಾಗೂ ಆನೆಗಳ ಆಶ್ರಯಧಾಮದಲ್ಲಿರುವ ಆನೆಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಕೇಂದ್ರ ಸಚಿವೆ ಹಾಗೂ ಪ್ರಾಣಿಗಳ ಹಕ್ಕು ಕಾರ್ಯಕರ್ತೆ ಮೇನಕಾ ಗಾಂಧಿ ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. 67 ವರ್ಷಗಳಿಂದ ಸರಪಳಿಯಲ್ಲಿ ಬಂಧಿತವಾಗಿರುವ ಬಂಡೂಲ (ಆನೆ)ಗಳ ದುರವಸ್ಥೆ ಬಗ್ಗೆ ಶ್ರೀಲಂಕಾದಲ್ಲಿದ್ದು, ತನ್ನೊಂದಿಗೆ ಸಂಪರ್ಕದಲ್ಲಿರುವ ಹಲವರು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

‘‘ಶ್ರೀಲಂಕಾ ಗೌರವಾರ್ಹ ಹಾಗೂ ಸುಂದರ ದ್ವೀಪ. ಆನೆಗಳನ್ನು ಈ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದು ಶ್ರೀಲಂಕಾದ ಗೌರವಕ್ಕೆ ತಕ್ಕುದಾದಲ್ಲ’’ ಎಂದು ಮೇನಕಾ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸರಪಳಿ ಬಿಗಿಯುತ್ತಿರುವುದರಿಂದ ಆನೆಗಳ ಮುಂಗಾಲಿನಲ್ಲಿ ರಕ್ತಸೋರುವ ಗಾಯಗಳ ಬಗ್ಗೆ ಶ್ರೀಲಂಕಾ ಮಾಧ್ಯಮ ವರದಿ ಮಾಡಿತ್ತು. 67 ವರ್ಷಗಳಿಂದ ಸರಪಳಿಯಿಂದ ಕಟ್ಟಿ ಹಾಕಲಾದ ಆನೆಗಳನ್ನು ಬಿಡುಗಡೆ ಮಾಡುವಂತೆ ಮೇನಕಾ ಗಾಂಧಿ ಶ್ರೀಲಂಕಾ ಅಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ. ಮುಕ್ತವಾಗಿ ಜೀವಿಸಲು ರಿದಿಯಗಾಮಾ ನ್ಯಾಶನಲ್ ಪಾರ್ಕ್‌ಗೆ ಆನೆಗಳನ್ನು ಕಳುಹಿಸಿ ಕೊಡುವಂತೆ ಮೇನಕಾ ಗಾಂಧಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News