ಅಪರಾಧ ಪ್ರಮಾಣದಲ್ಲಿ ದ.ಕ.ಜಿಲ್ಲೆ 2 ಸ್ಥಾನದಲ್ಲಿರುವುದು ಖೇದಕರ: ರೋಹಿದಾಸ್

Update: 2018-09-18 12:37 GMT

ಮೂಡುಬಿದಿರೆ, ಸೆ. 18: ಯುವಶಕ್ತಿ ದುರ್ಬಳಕೆಯಾಗುತ್ತಿದೆ ಎಂಬ ಅಪಸ್ವರ ಎಲ್ಲೆಡೆ ಕೇಳಿ ಬರುತ್ತಿದ್ದು, ಧಾರ್ಮಿಕ ಮತ್ತು ಶೈಕ್ಷಣಿಕ ತವರೂರೆನಿಸಿದ ದ.ಕ. ಜಿಲ್ಲೆಯು ಅಪರಾಧ ಪ್ರಮಾಣದಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿರುವುದು ಖೇದಕರ. ಸಮಾಜ ಚಿಂತಕರು, ಬುದ್ಧಿಜೀವಿಗಳು, ಧಾರ್ಮಿಕ ನಾಯಕರು ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ರೋಹಿದಾಸ್ ಪಿ. ಹೇಳಿದರು.

ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ರೋಟರಿ ಇಂಟರ್ಯಾಕ್ಟ್ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ಜಿಲ್ಲಾ ಸಹ ತರಬೇತುದಾರ ಶೇಖರ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡುಬಿದಿರೆ ಅಧ್ಯಕ್ಷ ವಿನ್ಸೆಂಟ್ ಡಿಕೋಸ್ತ ಅಧ್ಯಕ್ಷತೆ ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಶ್ರೀಕಾಂತ್ ಕಾಮತ್, ರೋಟರಿ ಜಿಲ್ಲಾ ಕಾರ್ಯಕ್ರಮ ವಿಭಾಗದ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ರೋಟರಿ ಉಪರಾಜ್ಯಪಾಲ ಪ್ರಕಾಶ್ ಕಾರಂತ, ಇಂಟರ್ಯಾಕ್ಟ್ ಜಿಲ್ಲಾಧ್ಯಕ್ಷ ಸುರೇಶ್ ಎಂ., ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ, ಎಕ್ಸಲೆಂಟ್ ಕಾಲೇಜಿನ ಚೆಯರ್‍ಮೆನ್ ಯುವರಾಜ್ ಜೈನ್, ರೋಟರಿ ಟೆಂಪಲ್ ಟೌನ್ ಕಾರ್ಯದರ್ಶಿ ಡೆನ್ನಿಸ್ ಪಿರೇರಾ, ಯುವ ಸೇವಾ ವಿಭಾಗದ ನಿರ್ದೇಶಕ ಹರೀಶ್ ಕಾಪಿಕಾಡ್ ಭಾಗವಹಿಸಿದರು.

ವಿನ್ಸೆಂಟ್ ಡಿಕೋಸ್ತ ಸ್ವಾಗತಿಸಿದರು. ಹರೀಶ್ ಕಾಪಿಕಾಡ್ ವಂದಿಸಿದರು. ಪ್ರವೀಣ್ ಪಿರೇರಾ, ದೀಪ್ತಿ ಪ್ರವೀಣ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News