ದಕ್ಷಿಣ ವಲಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್‍ಗೆ ಎರಡು ಕೂಟ ದಾಖಲೆ, 40 ಪದಕ

Update: 2018-09-18 12:50 GMT

ಮೂಡುಬಿದಿರೆ, ಸೆ.18: ಆಂಧ್ರಪ್ರದೇಶದ ಗುಂಟೂರಿನಲ್ಲಿ ಸ. 15 ಮತ್ತು 16 ರಂದು ನಡೆದ ದಕ್ಷಿಣ ವಲಯ ಅಂತರ್ ರಾಜ್ಯ ಕಿರಿಯರ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ರೀಡಾಪಟುಗಳು ಎರಡು ಕೂಟ ದಾಖಲೆಗಳು,  10 ಚಿನ್ನ, 20 ಬೆಳ್ಳಿ, 10 ಕಂಚಿನ ಪದಕಗಳೊಂದಿಗೆ ಒಟ್ಟು 40 ಪದಕಗಳನ್ನು ಪಡೆದು ಸಾಧನೆಯನ್ನು ಮಾಡಿದ್ದಾರೆ. ಸಂಸ್ಥೆಯ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಎಂ.ಮೋಹನ ಆಳ್ವ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಎರಡು ಕೂಟ ದಾಖಲೆ

 ಮನು ಡಿ.ಪಿ. - 20 ರ ವಯೋಮಿತಿ -ಜಾವೆಲಿನ್ ಎಸೆತ - ಪ್ರಥಮ (ಹೊಸ ಕೂಟ ದಾಖಲೆ 66.33 ಮೀ.)
ಸುಪ್ರಿಯಾ - 18 ರ ವಯೋಮಿತಿ - ಹೈಜಂಪ್ - ಪ್ರಥಮ (ಹೊಸ ಕೂಟ ದಾಖಲೆ 1.75 ಮೀ)

16 ರ ವಯೋಮಿತಿಯ ಬಾಲಕರ ವಿಭಾಗ

ಗಣೇಶ್ - ಶಾಟ್‍ಪುಟ್ (ತೃತೀಯ), ಸಾಗರ್‍ದೀಪ್ - ಹ್ಯಾಮರ್ ಎಸೆತ - (ದ್ವಿತೀಯ), ಶ್ರೀಕಾಂತ್ - ಶಾಟ್ ಪುಟ್ - (ದ್ವಿತೀಯ). 

16 ರ ವಯೋಮಿತಿಯ ಬಾಲಕಿಯರ ವಿಭಾಗ

ದೀಪಾಶ್ರೀ - 800ಮೀ (ತೃತೀಯ), ವೀಣಾ ಟಿ. - ಜಾವೆಲಿನ್ ಎಸೆತ (ತೃತೀಯ), ರಮ್ಯಶ್ರೀ ಜೈನ್ - ಶಾಟ್‍ಪುಟ್ (ದ್ವಿತೀಯ). 

18 ರ ವಯೋಮಿತಿಯ ಬಾಲಕರ ವಿಭಾಗ

ರಾಹುಲ್ ರಾಮ್ - ಹ್ಯಾಮರ್ ಎಸೆತ (ಪ್ರಥಮ), ಮುತ್ತಪ್ಪ - ಹ್ಯಾಮರ್ ಎಸೆತ (ತೃತೀಯ), ನಾಗೇಂದ್ರ ಅಣ್ಣಪ್ಪ - ಶಾಟ್‍ಪುಟ್ (ದ್ವಿತೀಯ), ಡಿಸ್ಕಸ್ ಎಸೆತ (ಪ್ರಥಮ), ಆಶ್ರಿತ್ - 1500 ಮೀ (ದ್ವಿತೀಯ), ಓಂಕಾರ್ 1500 ಮೀ (ತೃತೀಯ), ರಿನ್ಸ್, ಮಿಲನ್, ಕೃಷ್ಣ - ಮಿಡ್ಲ್ ರಿಲೇ (ದ್ವಿತೀಯ).

18 ರ ವಯೋಮಿತಿಯ ಬಾಲಕಿಯರ ವಿಭಾಗ

ಜೋಶ್ನಾ - 100 ಮೀ (ಪ್ರಥಮ) ಮಿಡ್ಲ್ ರಿಲೇ (ದ್ವಿತೀಯ), ಸೃಷ್ಟಿ - ಡಿಸ್ಕಸ್ ಎಸೆತ (ದ್ವಿತೀಯ), ವೀಕ್ಷಾ - ಹ್ಯಾಮರ್ ಎಸೆತ (ದ್ವಿತೀಯ), ಸುಪ್ರಿಯಾ - ಹೈಜಂಪ್ (ಪ್ರಥಮ, ಹೊಸ ಕೂಟ ದಾಖಲೆ), ಅಂಕಿತಾ ವಿ.ಎಸ್. - ಟ್ರಿಪಲ್ ಜಂಪ್ (ದ್ವಿತೀಯ), ಧನುಷಾ ಶೆಟ್ಟಿ - 5000 ಮೀ ನಡಿಗೆ (ದ್ವಿತೀಯ).

20 ರ ವಯೋಮಿತಿಯ ಬಾಲಕರ ವಿಭಾಗ

ಮನು ಡಿ.ಪಿ. - ಜಾವೆಲಿನ್ ಎಸೆತ (ಪ್ರಥಮ, ಹೊಸ ಕೂಟ ದಾಖಲೆ 66.33 ಮೀ), ಯೋಗೇಶ್ - ಪೋಲ್‍ವಾಲ್ಟ್ (ತೃತೀಯ), ಶಶಿಧರ್ - 1500 ಮೀ (ದ್ವಿತೀಯ), 800 ಮೀ -ತೃತೀಯ, ಪ್ರಶಾಂತ್ - 1500 ಮೀ (ತೃತೀಯ),ಪ್ರದ್ಯುಮ್ನ ಬೋಪಯ್ಯ, ಸಂತೋಷ್ - 4*400 ರಿಲೇ (ದ್ವಿತೀಯ), ಯಮನೂರಪ್ಪ - ಹ್ಯಾಮರ್ ಎಸೆತ (ಪ್ರಥಮ), ಬಸವರಾಜ್ - 3000 ಸ್ಟೀಪಲ್‍ಚೇಸ್ (ತೃತೀಯ).

20 ರ ವಯೋಮಿತಿಯ ಬಾಲಕಿಯರ ವಿಭಾಗ

ದೀಕ್ಷಾ - 2000 ಮೀ ಸ್ಟೀಪಲ್‍ಚೇಸ್ (ಪ್ರಥಮ), 1500 ಮೀ ದ್ವಿತೀಯ, ಅರ್ಪಿತಾ 10 ಕಿ.ಮೀ. ನಡಿಗೆ (ದ್ವಿತೀಯ), ಶಾಲಿನಿ - 3000 ಮೀ (ದ್ವಿತೀಯ), ಐಶ್ವರ್ಯಾ - ಡಿಸ್ಕಸ್ ಎಸೆತ (ದ್ವಿತೀಯ), ಚೈತ್ರ - 5000 ಮೀ (ಪ್ರಥಮ), ಅಮ್ರೀನ್ - ಹ್ಯಾಮರ್ ಎಸೆತ (ದ್ವಿತೀಯ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News